ಮನೆ ಕಳ್ಳತನ: ಪ್ರತ್ಯೇಕ ಪ್ರಕರಣಗಳಲ್ಲಿ 11 ಬಂಧನ

ವಿಜಯಪುರ:ಜ.25:ನಗರದಲ್ಲಿ ಪ್ರತ್ಯೇಕ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಕಳ್ಳರನ್ನು ಪೆÇಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ತಿಳಿಸಿದ್ದಾರೆ.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಲಕ್ಷ 17 ಸಾವಿರ ಮೌಲ್ಯದ 210 ಗ್ರಾಂ ತೂಕದ ಚಿನ್ನಾಭರಣ, 20 ಗ್ರಾಂ ಬೆಳ್ಳಿ, ಎಲ್‍ಇಡಿ ಟಿವಿ, ಎರಡು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ಜಮೀರ ಖಾನ್, ಅನ್ವರ ಶೇಖ್, ಆಸೀಫ್ ಹವಾಲ್ದಾರ್, ಸನ್ಮಾನ ಖಾನ ಬಂಧಿತ ಆರೋಪಿಗಳು.
ನಗರದ ಮದೀನಾನಗರದಲ್ಲಿ 4 ಮನೆಗಳ್ಳತನ ಕೃತ್ಯಗಳನ್ನು ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಮೂರು ಗಾಂಧಿಚೌಕ್ ಹಾಗೂ ಒಂದು ಜಲನಗರ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಅಲ್ಲದೇ, ಮತ್ತೊಂದೆಡೆ ನಗರದ ಝಂಡಾ ಕಟ್ಟಾ ಹಳಕೇರಿ ಗಲ್ಲಿಯ ಸಮೀರ ಇನಾಂದಾರನ್ನು ಬಂಧಿಸಿ 2.70 ಲಕ್ಷ ಮೌಲ್ಯದ 50 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ. ಇನ್ನು ನಗರದ ಸದ್ಗುರು ಜ್ಯುವೇಲರಿ ಶಾಪನಲ್ಲಿ 80 ಸಾವಿರ ಮೌಲ್ಯದ 15 ಗ್ರಾಂ ಚಿನ್ನವನ್ನು ದೋಚಿದ್ದ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಬ್ಯಾಗಳಿಯ ಆರೋಪಿ ಲಲಿತಾ @ ಶಾಂತಾಬಾಯಿ ಗಾಯಕವಾಡ ಅವರನ್ನು ಬಂಧಿಸಲಾಗಿದೆ.
ಇರಾನಿ ಕಾಲೋನಿ ನಿವಾಸಿ ಗೌಸಮೋದ್ದಿನ ಮಕಾನದಾರ, ಆಸಾರಗಲ್ಲಿ ನಿವಾಸಿ ಸಾಬೀರ ಬಗಲಿ ಎಂಬುವರನ್ನು ಬಂಧಿಸಿ 1.20 ಲಕ್ಷ ಮೌಲ್ಯದ 3 ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಸಿಂದಗಿ ನಾಕಾ ಬಳಿ ಹರಣಶಿಕಾರಿ ಕಾಲನಿಯ ಜಂಪ್ಯಾ ರಾಜು ಚವ್ಹಾಣ, (36) ವರ್ಷ, ಜಾತಿ-ಹರಣಶಿಕಾರಿ,
ಪರಶುರಾಮ @ ಪರಶ್ಯಾ ತಂದೆ ಲಕ್ಷಣ ಕಾಳೆ (25) ಹಾಗೂ ಬಸವರಾಜ ಉರ್ಫ ಬಸ್ಯಾ ತಂದೆ ಶಿವಾಜಿ ಚವ್ಹಾಣ (34) ಎಂಬ ಆರೋಪಿಗಳು ಮನೆಗಳಿಗೆ ಹಾಕಿದ ಬೀಗ ಮುರಿಯಲು ಕಬ್ಬಿಣದ ಸಲಾಕೆ ಹಿಡಿದುಕೊಂಡು ಸಜ್ಜಾಗಿ ಬರುತ್ತಿದ್ದ ವೇಳೆ ಪೆÇಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿ ಮನೆಗಳ ಕಳ್ಳತನಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ವಿಜಯಪುರ ಗೋಲಗುಮ್ಮಟ್ ಪೆÇಲೀಸ್ ಠಾಣೆ ವ್ಯಾಪ್ತಿಯ 01, ಜಲನಗರ ಪೆÇಲೀಸ್ ಠಾಣೆಯ 01, ಆದರ್ಶನಗರ ಪೆÇಲೀಸ್ ಠಾಣೆಯ 02 ಪ್ರಕರಣದ ಹೀಗೆ ಒಟ್ಟು 04 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಈ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಮೂವರು ಆರೋಪಿತರ ಕಡೆಯಿಂದ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 281.5 ಗ್ರಾಂ ಬಂಗಾರದ ಆಭರಣಗಳು ಕಿಮ್ಮತ್ತ 16,88,000ರೂ. ಕಿಮ್ಮತ್ತಿನ ಬಂಗಾರದ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಎಸ್ಪಿ ವಿವರಿಸಿದರು.
ಒಟ್ಟು 24 ಮನೆಗಳ್ಳತನ ಪ್ರಕರಣವನ್ನು ಪೆÇಲೀಸರು ಬೇಧಿಸಿದ್ದು, ಪೆÇಲೀಸರ ಕಾರ್ಯವನ್ನು ಮೆಚ್ಚಿ ಎಸ್ಪಿ ಸೋನಾವಣೆ ಬಹುಮಾನ ಘೋಷಿಸಿದ್ದಾರೆ.