ಮನೆ ಕಳ್ಳತನ : ಓರ್ವನ ಬಂಧನ

ಕಲಬುರಗಿ,ಅ.30-ನಗರದ ಕೆ.ಹೆಚ್.ಬಿ.ಕಾಲೋನಿಯಲ್ಲಿ 2013ರಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ಸಾವಳಗಿ (ಬಿ) ಗ್ರಾಮದ ಪವಾನ್ ಸೋಪ್ಯಾ ಪವಾರ (35) ಎಂಬಾತನನ್ನು ಬಂಧಿಸಿ 10 ಗ್ರಾಂ.ಬಂಗಾರದ ಸುತ್ತುಂಗರ, 40 ಗ್ರಾಂ ಬೆಳ್ಳಿ ಸೇರಿದಂತೆ 54 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
2013ರಲ್ಲಿ ಕೆ.ಹೆಚ್.ಬಿ.ಕಾಲೋನಿಯ ಗುರುಬಾಯಿ ನಾಗಪ್ಪ ಹಡಪದ ಎಂಬುವವರ ಮನೆ ಬೀಗ ಮುರಿದು ಮನೆಯ ಅಲಮಾರಿಯಲ್ಲಿಟ್ಟಿದ್ದ ಬಂಗಾರ, ಬೆಳ್ಳಿ, ನಗದು ಹಣ ದೋಚಿಕೊಂಡು ಹೋಗಲಾಗಿತ್ತು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ ಅವರ ನಿರ್ದೇಶನದ ಮೇರೆಗೆ ಉಪ ಪೊಲೀಸ್ ಆಯುಕ್ತ ಡಿ.ಕಿಶೋರಬಾಬು, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀಕಾಂತ ಕಟ್ಟಿಮನಿ ಮಾರ್ಗದರ್ಶನದಲ್ಲಿ ಎ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಂಶುಕುಮಾರ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಿದ್ದರಾಮೇಶ್ವರ ಗಡೇದ್, ಸಿಬ್ಬಂದಿಗಳಾದ ನಜ್ಜುಮೊದ್ದೀನ್, ದೇವೇಂದ್ರ, ಮಲ್ಲಿಕಾರ್ಜುನ, ಫಿರೋಜ್, ಭೋಗೇಶ್, ಮೋಶಿನ್ ಅವರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.