ಮನೆ ಕಳ್ಳತನ: ಆರೋಪಿ ಬಂಧನ

ಕಲಬುರಗಿ,ಏ.26-ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ 20 ಸಾವಿರ ರೂ.ನಗದು, 9 ಮೊಬೈಲ್ ಸೇರಿ 62 ಸಾವಿರ ರುಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮದಿನಾ ಕಾಲೋನಿಯ ಅಬ್ಬು ದಸ್ತಗೀರ ಶೇಖ್ (39) ಎಂಬಾತನನ್ನೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಚೇತನಕುಮಾರ್, ಅಡೂರು ಶ್ರೀನಿವಾಸಲು ಹಾಗೂ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಪಿಐ ರಾಮಪ್ಪ ಸಾವಳಗಿ, ಪಿಎಸ್‍ಐ ಶಿವಪ್ಪ ಕಮಾಂಡೋ, ಮುಖ್ಯಪೇದೆಗಳಾದ ಪ್ರಲ್ಹಾದ ಕುಲಕರ್ಣಿ, ಗುರುಮೂರ್ತಿ, ಸಂಜುಕುಮಾರ, ಸಿಬ್ಬಂದಿಗಳಾದ ಶಿವಲಿಂಗಪ್ಪ, ಶ್ರೀಕಾಂತ, ನೀಲಕಂಠ ಪಾಟೀಲ, ಹರಿಕಿಶೋರ, ರಾಜಸಾಬ, ಮಹಿಳಾ ಸಿಬ್ಬಂದಿಗಳಾದ ನಮೃತಾ, ಪದ್ಮಾವತಿ ಅವರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.