ಮನೆ ಕಳ್ಳತನ : ಅಂತರಜಿಲ್ಲಾ ಕಳ್ಳನ ಬಂಧನ

ಮುಂಡಗೋಡ,ನ4 : ತಾಲೂಕಿನಲ್ಲಿ ಕಳೆದ ಎರಡು ವರ್ಷದಿಂದ ಮನೆ ಕಳ್ಳತನ ಮಾಡುತ್ತಿದ್ದ ಅಂತರಜಿಲ್ಲಾ ಆರೋಪಿಯನ್ನು ಮುಂಡಗೋಡ ಪೊಲೀಸರು ಮಂಗಳವಾರ ಬಂಧಿಸಿ ಆರೋಪಿಯಿಂದ 5ಲಕ್ಷ ರೂ. ಬೆಲೆಬಾಳುವ ಆಭರಣ ಮತ್ತು ನಗದು ಜಪ್ತಿ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ತಡಸ ಪಟ್ಟಣದ ಕಮಲಾನಗರದ ಕೃಷ್ಣ ಲಮಾಣಿ ಬಂಧಿತ ಆರೋಪಿ. ಕಳೆದ ಎರಡು ವರ್ಷದಿಂದ ಈತನು ರಾತ್ರಿ ವೇಳೆ ಮನೆಯಲ್ಲಿ ಜನರು ಮಲಗಿದ್ದಾಗ ಮನೆಯ ಹಿಂದಿನ ಬಾಗಿಲು ಮುರಿದು ಒಳಗೆ ಹೋಗಿ ಕಳ್ಳತನ ಮಾಡುತ್ತಿದ್ದ. ಅ.19ರಂದು ಮೈನಳ್ಳಿ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿ ಹೋಗುವಾಗ ಮನೆಯವರು ನೋಡಿ ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾಗ ಬೈಕ್ ಬಿಟ್ಟು ಪರಾರಿಯಾಗಿದ್ದನು. ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ವೇಳೆ ಜಿಲ್ಲೆಯಲ್ಲಿ ಅಲ್ಲದೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಅಂದಾಜು 3.50ಲಕ್ಷ ರೂ. ಬೆಲೆ ಬಾಳುವ 70 ಗ್ರಾಂ. ಬಂಗಾರ, 15ಸಾವಿರ ಬೆಲೆಬಾಳುವ 200ಗ್ರಾಂ. ಬೆಳ್ಳಿ ಹಾಗೂ 31ಸಾವಿರ ನಗದು ಜಪ್ತಿ ಮಾಡಿದ್ದಾರೆ. ಈ ಕುರಿತು ಮುಂಡಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆÇಲೀಸ್ ಅಧೀಕ್ಷಕ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಬದರಿನಾಥ ನಿರ್ದೇಶನದಲ್ಲಿ ಶಿರಸಿ ಉಪವಿಭಾಗ ಪೆÇಲೀಸ್ ಉಪ ಅಧೀಕ್ಷಕ ಗೋಪಾಲಕೃಷ್ಣ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭುಗೌಡ ಡಿ.ಕೆ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು.