ಮನೆ ಕಳೆದುಕೊಂಡವರಿಗೆ ವಿಜಯಸಿಂಗ್ ಸಹಾಯ ಹಸ್ತ

ಹುಲಸೂರು: ಮೇ.31:ತಾಲ್ಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಮಳೆ ಬಿರುಗಾಳಿಯಿಂದ ಮನೆ ಕುಸಿದಿರುವ ಮನೆಗಳಿಗೆ ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್ ಅವರು ಧರ್ಮಸಿಂಗ್ ಫೌಂಡೇಶನ ವತಿಯಿಂದ ತಲಾ 5 ಸಾವಿರ ರೂಪಾಯಿ ಯಂತೆ ಮೂರು ಕುಟುಂಬಗಳಿಗೆ 15 ಸಾವಿರ ರೂಪಾಯಿ ಧನ ಸಹಾಯ ಮಾಡಿದರು .

ಕಾಶಿನಾಥ ಅರ್ಜುನ ಕಾಂಬಳೆ, ಸುಧಾಮ ಸುರೇಶ, ಕಾಂಬಳೆ, ಕಔದರ ಕಾಂಬಳೆ ಮನೆ ಕಳೆದುಕೊಂಡ ಫಲಾನುಭವಿಗಳಾಗಿದ್ದಾರೆ.

ಈ ಸಂಧರ್ಭದಲ್ಲಿ ಸಂತೋಷ ಗುತ್ತೇದಾರ, ಜೈದಿಪ ತೆಲಂಗ, ವಿಷ್ಣು ಖಂಡೇ, ಹಣಮಂತ ಮಲ್ಕಪೂರ, ಶರಣು ಅಲಗೂಡ, ರಂಜಿತ ಗಾಯಕವಾಡ ಸೇರಿದಂತೆ ಗ್ರಾಮದ ಆನಂದ ಪಾಟೀಲ, ಚಂದ್ರಕಾಂತ, ದೀಲೀಪ ಬನಸುಡೆ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು