ಮನೆ ಕಲ್ಪಿಸಲು ಅಹೋರಾತ್ರಿ ಪ್ರತಿಭಟನೆ

ರಾಯಚೂರು, ಮಾ.೦೪- ನಗರದ ಸಿಯಾತಲಾಬ್ ವಾರ್ಡ್ ನಂ ೩೧ ರಲ್ಲಿ ಶಿಥಿಲಗೊಂಡ ಮನೆಗಳನ್ನು ನೆಲಸಮಗೊಳಿಸಿ ೮ ತಿಂಗಳು ಕಳೆದರೂ ಮನೆ ನಿರ್ಮಾಣ ಕಾಮಗಾರಿ ಕೈಗೊಳ್ಳದೇ ನಿರ್ಲಕ್ಷ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಾಂತಿ ಯೋಗಿ ಶ್ರೀ ಬಸವೇಶ್ವರ ಸೇವಾ ಸಮತಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು.
ನಗರದ ವಾರ್ಡ್ ನಂ. ೩೦-೩೧ ರ ರಾಜೀವ್ ನಗರದ ಸ್ಲಮ್‌ನಲ್ಲಿ ಮನೆ ಕಳೆದುಕೊಂಡಿರುವ ನಿವಾಸಿಗಳಿಗೆ ಕೂಡಲೇ ಮನೆ ನಿರ್ಮಿಸಬೇಕೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮನೆ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಬೇಕು ಇಲ್ಲದಿದ್ದರೆ ಸರ್ಕಾರ ಗಮನಕ್ಕೆ ತಲುಪು ವರೆಗೂ ಅಹೋರಾತ್ರಿ ಧರಣಿ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜೇಶ್ ಕುಮಾರ ಸ್ಲಂ ನಿವಾಸಿಗಳು ಸೇರಿದಂತೆ ಉಪಸ್ಥಿತರಿದ್ದರು.