
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.07: ಮೂಲ ನಂಬಿಕೆಗಳು ಇರಲಿ ಆದರೆ ಮೂಢನಂಬಿಕೆ ಬೇಡ ಮನೆಯ ವಾಸ್ತುವಿಗಿಂತ ಮನದ ವಾಸ್ತು ವಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಹೇಳಿದರು.
ಅವರು ನಿನ್ನೆ ಅಲ್ಲೀಪುರ ಮಹಾದೇವತಾತ ಮಠದಲ್ಲಿ. ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಹಮ್ಮಿಕೊಂಡಿದ್ದ
ಜಿಲ್ಲಾ ಮಟ್ಟದ ಸಮ್ಮೇಳನ ಹಾಗು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಕ್ಕಳು ಯಾವುದೇ ವಿಷಯವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿ ಬದುಕಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಬಿ. ವೆಂಕಟೇಶ ಪ್ರಸಾದ್, ಭಾರತ ದೇಶ ಮೂಢನಂಬಿಕೆ ಮುಕ್ತ ದೇಶವಾಗಬೇಕು ವಿಜ್ಞಾನ ತಂತ್ರಜ್ಞಾನ ಪ್ರಗತಿಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ಧ ಇತಿಹಾಸ ಆಕಾಡೆಮಿಯ ಜಿಲ್ಲಾ ಅದ್ಯಕ್ಷ ಟಿ. ಎಚ್. ಎಂ. ಬಸವರಾಜ ಮಾತನಾಡಿ, ವಿಜ್ಞಾನ ಬೆಳದಷ್ಟು ಜನರಲಿ ಮೂಢನಂಬಿಕೆ ದೂರವಾಗುತ್ತದೆ. ಇಂತಹ ಸಮ್ಮೇಳನಗಳು ಜನರಲ್ಲಿ ಜಾಗೃತಿ ಮೂಡಿಸುತ್ತವೆ ಎಂದರು.
ಹರಗಿನ ಡೋಣಿಯ ಶ್ರೀ ಗಳು ಕಾರ್ಯಕ್ರಮದ ಸಾನಿದ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಜಿಲ್ಲಾ ಘಟಕದ ಅದ್ಯಕ್ಷ ಆರ್. ಎಚ್. ಎಂ. ಚನ್ನಬಸವಸ್ವಾಮಿ ಸಮ್ಮೇಳನದ ಉದ್ದೇಶ ಹಾಗು ಪರಿಷತ್ತಿನ ಧ್ಯೇಯಗಳನ್ನು ಪ್ರಾಸ್ತಾವಿಕ ನುಡಿಯಲ್ಲಿ ಹಂಚಿಕೊಂಡರು.
ಕುರುಗೋಡು ತಾಲೂಕಿನ ಕ್ಷೇತ್ರ ಶಿಕ್ಣಣಾಧಿಕಾರಿ ಸಿದ್ದಲಿಂಗ ಮೂರ್ತಿ, ಕ.ಸಾ.ಪ ಜಿಲ್ಲಾ ಘಟಕದ ಆದ್ಯಕ್ಷ ಡಾ.ನಿಷ್ಟಿರುದ್ರಪ್ಪ, ಗುತ್ತಿಗೆದಾರ ಮಸೀದಿಪುರದ ಸಿದ್ಧರಾಮನಗೌಡ, ರಾಜ್ಯ ಹಾಗು ಜಿಲ್ಲಾ ಘಟಕಗಳ ವೈಜ್ಞಾನಿಕ ಪರಿಷತ್ತಿನ ಕಾರ್ಯಕಾರಿ ಸಮಿತಿಯವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪಿ.ಯು ಹಾಗು ಎಸ್ ಎಸ್ ಎಲ್ ಸಿ ಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಸಸಿಗಳನ್ನು ನೀಡಿ ಅವರಲ್ಲಿ ಪರಿಸರ ಜಾಗೃತೆ ಮೂಡಿಸಲಾಯಿತು.
ಇಂದ್ರಾಣಿ ನಾಟ್ಯಕಲಾ ಟ್ರಸ್ಟ್ ಮಕ್ಳಳು ವಿವಿಧ ನೃತ್ಯ ಪ್ರದರ್ಶನ ನೀಡಿದರು. ಹಿರೇಮಠ ಹಾಗು ಲೋಕೇಶ್ ವಿಜ್ಞಾನದ ಗೀತೆಗಳನ್ನು ಹಾಡಿದರು. ಹೇಮ ಹೊಸೂರು ಮಠ ಸ್ವಾಗತಿಸಿದರು. ಉಪನ್ಯಾಸಕ ಎ.ಎಂ.ಪಿ ವೀರೇಶಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ರಮೇಶ್ ವಂದಿಸಿದರು.