ಮನೆಯ ಯಜಮಾನಿನೇ ಗೃಹಲಕ್ಷ್ಮೀ – ಶರಣಮ್ಮ

ದೇವದುರ್ಗ,ಆ.೨೯- ಇದೇ ೩೦ ರಂದು ಸರಕಾರದ ಗೃಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮ ನಡೆಯಲಿದೆ.ಮಹಿಳಾ ಮತ್ತು ಮಕ್ಕಳ .ಕಲ್ಯಾಣ ಇಲಾಖೆಯ ರಾಮದುರ್ಗ ವಲಯದ ಮೇಲ್ವಿಚಾರಕಿ.ಶರಣಮ್ಮ ರಾಠೊಡ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಗಡದಿನ್ನಿ.ಗಾ.ಪಂ.ವಾಪ್ತಿಯಅಂಗನವಾಡಿ ಕಾರ್ಯಕರ್ತೆ ಯರೊಂದಿಗೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ, ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ರೂ.೨೦೦೦/-ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಈಗಾಗಲೇ ಯೋಜನೆಯಡಿ ನೊಂದಣಿಯಾಗಿರುವ ಫಲಾನುಭವಿಗಳಿಗೆ, ಇಂದು.೩೦ ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಮುಖ್ಯ ಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಸಂದೇಶ ಬರುವುದರಿಂದ ನೋಂದಾಯಿತ ಫಲಾನುಭವಿಗಳು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿಕೊಂಡಿರುವ ಮೊಬೈಲ್ ಫೋನ್‌ನೊಂದಿಗೆ ದೇವದುರ್ಗ ತಾಲ್ಲೂಕಿನ ನಾಗಡದಿನ್ನಿ ಗ್ರಾ. ಪಂ ವ್ಯಾಪ್ತಿಯ ನೀಲಗಲ್ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗೃಹಲಕ್ಷ್ಮೀ ಅನುಷ್ಠಾನ ಕಾರ್ಯಕ್ರಮಕ್ಕೆ ಭಾಗವಹಿಸಿ, ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಎಲ್‌ಇಡಿ ವಾಲ್ ವ್ಯವಸ್ಥೆಗೊಳಿಸಲಾಗಿದ್ದು ಕಾರ್ಯಕ್ರಮಕ್ಕೆ ಸಾರ್ವಜನಿಕರು, ಫಲಾನುಭವಿಗಳು, ಚುನಾಯಿತ ಜನ ಪ್ರತಿನಿಧಿಗಳು ಆಗಮಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಾಗಡದಿನ್ನಿ ,ಯರಮರಸ,ನೀಲಗಲ್,ತಿಪಲದಿನ್ನಿ, ಹೆಗ್ಗಡದಿನ್ನಿ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.