ಮನೆಯ ಮುಂದೆ ನಿಲ್ಲಿಸಿದ ಸೈಕಲ್ ಮೋಟಾರ್ ಕಳ್ಳತನ

ಅರಕೇರಾ.ಜೂ.೦೩- ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಸುಮಾರು ವರ್ಷಗಳಿಂದಲ್ಲೂ ರಾತ್ರಿ ಸಮಯದಲ್ಲಿ ಮನೆಯ ಮುಂದೆ ನಿಲ್ಲಿಸಿದ ಸೈಕಲ್ ಮೋಟಾರು ಕಳ್ಳತನವಾಗುತ್ತಿರುವದು ಸಾರ್ವಸಾಮಾನ್ಯವಾಗಿದೆ. ಈ ಗ್ರಾಮದಲ್ಲಿ ಕಳ್ಳತನವಾದ ಬೈಕ್‌ಗಳು ಮರಳಿ ಮಾಲಕರಿಗೆ ಹುಡಿಕೊಡುವುದರಲ್ಲಿ ಪೋಲಿಸ್ ಇಲಾಖೆ ಸಂಪೂರ್ಣ ವಿಫಲವಾಗಿದೆಂದು ಇಲ್ಲಿನ ಸಾರ್ವಜನಿಕರ ಮಾತಾಗಿದೆ.
ಮನೆಯ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡುವದು ಕಳ್ಳರ ಟಾರ್ಗೇಟ್ ಆಗಿದೆ. ಕಳ್ಳರು ಮನೆಯ ಮುಂದೆ ನಿಲ್ಲಿಸಿದ ಬುಲೈಟ್ ಮೋಟಾರ್ ವಾಹನ ಕಳ್ಳತನವಾಗಿ ೩ ತಿಂಗಳು ಗತಿಸಿದೆ. ದಿ ೩೧-೫-೨೦೨೧ ಸೋಮವಾರ ರಾತ್ರಿ ಮನೆಯ ಮುಂದೆ ನಿಲ್ಲಿಸಿದ ಸ್ಥಳದಲ್ಲೇ ಹಿರೋ ಸ್ಪೇಂಡ್ಲರ್ ಪ್ಲಸ್, ಸೈಕಲ್, ಮೋಟಾರ ವಾಹನ ಸಂಖ್ಯೆ ಕೆ.ಎ.೩೬ ಈ ಎ ೬೨೩೦ ಕಲರ ರೆಡ್ ವಾಹನ ರಾತ್ರಿ ಸಮಯದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದು ಬೆಳಾಗುವುದರೊಳಾಗಿ ಮನೆಯ ಮುಂದೆ ನಿಲ್ಲಿಸಿದ ವಾಹನ ಜಾಗದಲ್ಲಿ ಇಲ್ಲದಿರುವದನ್ನು ಕಂಡ ಗಾಡಿಯ ಮಾಲೀಕರವಿ ಕುಮಾರ ತಂದೆ ಪಂಪಣ್ಣ ರಾಯಚೂರು ಅಲ್ಲಲ್ಲಿ ನೋಡಿದರು ಗಾಡಿ ಕಾಣದಿದ್ದಾಗ ಗಾಡಿಯೂ ಕಳ್ಳವು ಆಗಿರುವುದಾಗಿ ರವಿಕುಮಾರ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಮದಲ್ಲಿನ ಮಧ್ಯಭಾಗದಲ್ಲಿರುವ ಮನೆಯ ಮುಂದೆ ನಿಲ್ಲಿಸಿದ ವಾಹನ ಕಳವು ಸುದ್ದಿ ಹರುತ್ತಿದ್ದಂತೆ ಗ್ರಾಮದಲ್ಲಿ ತಾತ್ಕಾಲಿಕವಾಗಿ ಕಳುವು ಪ್ರಕರಣಗಳು ಕಡಿಮೆಯಾಗಿದ್ದವು ಈಗ ಮತ್ತೆ ಕಳ್ಳತನ ವಾಗುತ್ತಿರುವದರಿಂದ ದ್ವೀಚಕ್ರವಾಹನ ಹೊಂದಿದವರು ಮನೆಯ ಮುಂದೆ ನಿಲ್ಲಿಸುವವರು ಹೆಚ್ಚಾಗಿದ್ದು ಈಗ ಭಯದವಾತವಾರಣ ಸೃಷ್ಟಿಯಾಗಿದೆ.
ಗ್ರಾಮದಲ್ಲಿ ಈ ಹಿಂದೆ ಸುಮಾರು ೫-೬ ಗಾಡಿಗಳು ಕಳ್ಳತನವಾಗಿದ್ದನ್ನು ಸ್ಮರಿಸಬಹುದಾಗಿದೆ ಕಳೆದು ಹೋಗಿದ್ದ ಗಾಡಿಗಳೂ ಇನ್ನೂ ಸಿಕ್ಕಿರುವುದಿಲ್ಲಾ ಈಗ ಮತ್ತೇ ನಿನ್ನೆ ರಾತ್ರಿ ಕಳ್ಳತನವಾಗಿದ್ದಕ್ಕೆ ಗ್ರಾಮದಲ್ಲಿ ಆಂತಕ ಶುರುವಾಗಿದೆ ಇನ್ನೂ ಮುಂದಾದರೂ ಪೋಲಿಸ್ ಅಧಿಕಾರಿಗಳು ಕಳ್ಳರ ಪತ್ತೆಗೆ ಗಮನ ಹರಿಸುವವರೇ ಕಾದುನೋಡಬೇಕಾಗಿದೆ?