ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ

ದಾವಣಗೆರೆ.ಡಿ.೨೦; ನಗರದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯಿಂದ “ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ” ಕಾರ್ಯಕ್ರಮ ನಡೆಯುತ್ತಿದ್ದು, ಈ ವಿನೂತನ ಕಾರ್ಯಕ್ರಮ  18ನೇ ವಾರ್ಡ್ ಕಾಯಿಪೇಟೆಯಲ್ಲಿ ಯಶಸ್ವಿ ನಡೆದಿದ್ದು ಆಸ್ತಿ ತೆರಿಗೆ ಮತ್ತು ನೀರಿನ ದರದಿಂದ 4,30,468 ರೂ ಸಂಗ್ರಹವಾಗಿದ್ದು, 26 ಉದ್ದಿಮೆಗಳಿಗೆ ಪರವಾನಿಗೆ ನೀಡಿದ್ದು ಇದರಿಂದ 58,225 ರೂ ಹಣ ಸಂಗ್ರಹವಾಗಿರುತ್ತದೆ ಎಂದು ಮೇಯರ್ ಬಿ.ಜಿ.ಅಜಯ್ ಕುಮಾರ್ ತಿಳಿಸಿದರು.ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗಾಗಿ 28 ಅರ್ಜಿಗಳನ್ನು ಸ್ವೀಕರಿಸಿದ್ದು ಇದರಲ್ಲಿ 06 ಜನನ ಪ್ರಮಾಣ ಪತ್ರ, 04 ಮರಣ ಪ್ರಮಾಣ ಪತ್ರ ಹಾಗೂ 08 ಪ್ರಮಾಣ ಪತ್ರಗಳ ತಿದ್ದುಪಡಿ ಮಾಡಿ ವಿತರಿಸಿದ್ದು ಇನ್ನುಳಿದ ಪ್ರಮಾಣ ಪತ್ರಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದರು. ಕಟ್ಟಡ ಪರವಾನಿಗೆ, ಬೀದಿ ದೀಪ, ಇಂಜಿನಿಯರ್ ಶಾಖೆಗೆ ಮತ್ತು ಇತರೆ ದೂರುಗಳಿಗೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಬಂದಿದ್ದು ಸೂಕ್ತ ದಾಖಲಾತಿಗಳನ್ನು ಪಡೆದು ಸ್ಥಳದಲ್ಲಿಯೇ ಕೆಲಸ ಮಾಡಿಕೊಡಲಾಗುತ್ತಿದೆ. ವಾರದಲ್ಲಿ ಮೂರು ದಿನ ನಿಗದಿಪಡಿಸಿದ ವಾರ್ಡ್ಗಳಿಗೆ ಭೇಟಿ ನೀಡುತ್ತಿದ್ದು ಆಯ ವಾರ್ಡ್ನ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದೇವೆ. ಈ ವಿಶೇಷ ಕಾರ್ಯಕ್ರಮಕ್ಕೆ ವಾರ್ಡ್ನ ಎಲ್ಲ ಜನತೆ ಆಗಮಿಸಿ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಪೌರರಾದ ಬಿ.ಜಿ. ಅಜಯ್ ಕುಮರ್ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ 18ನೇ ವಾರ್ಡ್‌ ಸದಸ್ಯರಾದ ಸೋಗಿ ಶಾಂತ್‌ಕುಮಾರ್ ಸೇರಿದಂತೆ ಇತರರು ಇದ್ದರು.