ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮದಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

 ದಾವಣಗೆರೆ.ಡಿ.೩೦; ನಗರದ ಮಹಾಜನತೆಗಾಗಿ ಮಹಾನಗರ ಪಾಲಿಕೆಯಿಂದ “ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ”ಕಾರ್ಯಕ್ರಮ ನಡೆಯುತ್ತಿದ್ದು, ಈ ವಿಶೇಷ ಕಾರ್ಯಕ್ರಮ 15, 16ನೇ ವಾರ್ಡ್ ದೇವರಾಜ್ ಅರಸ್ ಬಡಾವಣೆ ಮತ್ತು ವಿನೋಬನಗರದಲ್ಲಿ ಯಶಸ್ವಿ ನಡೆದಿದ್ದು ಆಸ್ತಿ ತೆರಿಗೆ ಮತ್ತು ನೀರಿನದರದಿಂದ 7,47,203 ರೂ ಸಂಗ್ರಹವಾಗಿದ್ದು, 6 ಉದ್ದಿಮೆಗಳಿಗೆ ಸ್ಥಳದಲ್ಲಿಯೇ ಪರವಾನಿಗೆ ವಿತರಿಸಿದ್ದು ಇದರಿಂದ 5,400 ರೂ ಸೇರಿ ಹಣ ಓಟ್ಟು 7,52,603 ರೂ ಸಂಗ್ರಹವಾಗಿದೆ ಎಂದು ಮೇಯರ್ ಬಿ.ಜಿ.ಅಜಯ್‌ಕುಮಾರ್ ಹೇಳಿದರು.ಈ ವೇಳೆ 15ನೇ ವಾರ್ಡ್ನಲ್ಲಿ 25 ಲಕ್ಷ ರೂ ಮೊತ್ತದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಮತ್ತು 16ನೇ ವಾರ್ಡ್ ವಿನೋಬನಗರದಲ್ಲಿ 20 ಲಕ್ಷ ರೂ ಮೊತ್ತದಲ್ಲಿ ಡಾಂಬರ್ ರಸ್ತೆ ನಿರ್ಮಾಣಕ್ಕೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದರು.ಜನನ/ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಿಗೆ, ಬೀದಿ ದೀಪ, ಇಂಜಿನಿಯರ್ ಶಾಖೆ ಮತ್ತುಇತರೆ ದೂರುಗಳಿಗೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಬಂದಿದ್ದು ಸೂಕ್ತ ದಾಖಲಾತಿಗಳನ್ನು ಪಡೆದು ಸ್ಥಳದಲ್ಲಿಯೇ ಕೆಲಸ ಮಾಡಿಕೊಡಲಾಗುತ್ತಿದೆ. ವಾರದಲ್ಲಿ ಮೂರು ದಿನ ನಿಗದಿಪಡಿಸಿದ ವಾರ್ಡ್ಗಳಿಗೆ ಭೇಟಿ ನೀಡುತ್ತಿದ್ದು ಆಯ ವಾರ್ಡ್ನ ಸ್ಥಳೀಯರಿಂದ ಉತ್ತಮ ಬೆಂಬಲ ಮತ್ತು ಪ್ರತಿಕ್ರಿಯೆ ಪಡೆಯುತ್ತಿದ್ದೇವೆ. ಈ ವಿನೂತನ ಕಾರ್ಯಕ್ರಮಕ್ಕೆ ವಾರ್ಡ್ನ ಎಲ್ಲ ಜನತೆ ಆಗಮಿಸಿ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಪೌರರಾದ ಬಿ.ಜಿ. ಅಜಯ್‌ಕುಮರ್ ವಿನಂತಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ.ವೀರೇಶ್, ವಿರೋಧ ಪಕ್ಷದ ನಾಯಕರು, 16ನೇ ವಾರ್ಡ್ನ ಸದಸ್ಯರಾದ ಎ.ನಾಗರಾಜ್, 15ನೇ ವಾರ್ಡ್ನ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಸೇರಿದಂತೆ ಸಾರ್ವಜನಿಕರು ಹಾಗೂ ಇತರರು ಇದ್ದರು.