
ಹಾಸನ, ಸೆ. ೯- ಮಲೆನಾಡಿನಲ್ಲಿ ಆನೆಗಳ ಹಾವಳಿ ಮುಂದುವರಿದಿದೆ. ಒಂಟಿ ಸಲಗ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ಮುಂಜಾನೆ ನಡೆದಿದೆ.ಸಂತೋಷ್ ಶೆಟ್ಟಿಯವರ ಮನೆಯ ಕಾಂಪೌಂಡಿನೊಳಗೆ ಕಾಡಾನೆ ನುಗ್ಗಿ ವಾಕಿಂಗ್ ನಡೆಸಿದೆ ,ಕಾಡಾನೆ ಕಂಡ ತಕ್ಷಣ ಸತೀಶ್ ಶೆಟ್ಟಿ ಮನೆಯವರು ಗಾಬರಿಯಿಂದ ಮನೆಯೊಳಗೆ ಓಡಿದ್ದಾರೆ.ಮನೆ ಬಳಿ ನಡೆದಾಡಿದ ಒಂಟಿ ಸಲಗ ನಂತರ ರಸ್ತೆಗೆ ಬಂದಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಸೈರನ್ ಬಾರಿಸಿದಾಗ ಅದು ರಸ್ತೆ ದಾಟಿ ಕಾಫಿ ತೋಟಕ್ಕೆ ನುಗ್ಗಿತು. ಕೊಲ್ಲಹಳ್ಳಿ ಗ್ರಾಮದ ಸುತ್ತಮುತ್ತ ಜಾಗೃತರಾಗಿರುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ.
ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಬರಲು ಕೂಲಿಕಾರರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.