ಮನೆಯೊಂದು ಸ್ವಚ್ಛ ಇದ್ದರೆ ಗ್ರಾಮ ಸ್ವಚ್ಛ ಇದ್ದಂತೆ:ಅರವಿಂದ ಸಾಹು

ಯಡ್ರಾಮಿ:ನ.17:ಇಜೇರಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮದ ಮಹಿಳೆಯರಿಗೆ ಕಸದ ಬುಟ್ಟಿ ವಿತರಣೆ ಮಾಡಲಾಯಿತ್ತು.
ಮೊದಲು ಮನೆ, ಮನೆ ಮುಂದಿನ ಕಸವನ್ನು ಸ್ವಚ್ಛ ಮಾಡಿಕೊಂಡಿದ್ದರೆ ಇಡಿ ಗ್ರಾಮವನ್ನು ಸ್ವಚ್ಛವಾಗಿ ನೋಡಬಹುದು ಹಾಗೂ ಅವರವರ ಮನೆ ಎದುರುಗಡೆ ಬಿದ್ದಿರುವ ಒಣ ಕಸ, ಹಸಿ ಕಸವನ್ನು ತೆಗೆದುಕೊಂಡು ಕಸದ ಬುಟ್ಟಿಯಲ್ಲಿ ಹಾಕಿ ಇಟ್ಟು ಗ್ರಾಮ ಪಂಚಾಯತಿಯ ವಲಸೆ ತೆಗೆದುಕೊಂಡು ಹೂಗುವ ವಾಹನದಲ್ಲಿ ಹಾಕಿ ನಿಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳಿ ಮತ್ತು ಗ್ರಾಮದಲ್ಲಿ ಯಾವುದೇ ರೀತಿ ವಲಸೆ ಇರುವುದಿಲ್ಲ ಎಂದು ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಅರವಿಂದ ಸಾಹು ರವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಲಾಲಯ್ಯ ಗುತ್ತೇದಾರ, ಮಾಶಾ ಪಟೇಲ ಪೆÇೀಲಿಸ್ ಪಾಟೀಲ,ಗ್ರಾಮ ಪಂಚಾಯತ ಅಧ್ಯಕ್ಷರಾದ ಸೀತಮ್ಮ ಕಟ್ಟಿಮನಿ, ಉಪಾಧ್ಯಕ್ಷರು ಖಾಲಿದ್ಮಿಯ್ ಮಡಕಿ,ಅಣ್ಣರಾಯ ಪಾಟೀಲ,ರವೀಂದ್ರ ಶ್ರುತಿ,ಮುದಕಪ್ಪ ನೈಕೋಡಿ,ಅಲ್ಲಪಟೇಲ,ಈರಣ್ಣ ಸೋಮಜಾಳ,ಹಣಮಂತ, ದೇವು, ರಾಜಶೇಖರ್ ಸಾಹು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಮತ್ತು ಸದಸ್ಯರು ಪಾಲಗೊಂಡಿದ್ದರು.