ಮನೆಯಿಂದ ಹೊರಗೆ ಬಾರದ ಜನ

ಜಿಟಿ ಜಿಟಿ ಮಳೆಗೆ ಜನ ಹೈರಾಣ
ಸಂಜೆವಾಣಿ ಪ್ರತಿನಿಧಿ
ಲಿಂಗಸುಗೂರು ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಜನ ಹೈರಾಣ ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ
ಮಳೆಯಲ್ಲಿ ಕೊಡೆ ಹಿಡಿದು ಮಿಂದೆದ್ದ ವಿದ್ಯಾರ್ಥಿನಿಯರು ನಿನ್ನೆ ಬೆಳಗ್ಗೆ ಯಿಂದ ಸುರಿದ ಜಿಟಿ ಜಿಟಿ ಮಳೆಯಲ್ಲಿ ಶಾಲಾ ವಿದ್ಯಾರ್ಥಿಗಳು ಕಾಲೇಜು ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶದಿಂದ ಲಿಂಗಸುಗೂರು ತಾಲೂಕಿನ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಊರುಗಳಿಂದ ಬರಬೇಕಾದರೆ ಹರಸಾಹಸ ಪಡಬೇಕಾಯಿತು ಆದರೂ ಕೂಡ ವಿದ್ಯಾರ್ಥಿನಿಯರು ಛಲಬಿಡದೆ ಉನ್ನತ ವಿದ್ಯಾಭ್ಯಾಸ ಮಾಡಲು ಮಳೆಯಾದರೆ ಏನು ಚಳಿಯಾದರೆ ಏನು ಕಾಲೇಜುಗಳಿಗೆ ಬಂದು ವಿದ್ಯಾಭ್ಯಾಸ ಮಾಡಲೇಬೇಕು ಎಂಬುದು ವಿದ್ಯಾರ್ಥಿನಿಯರು ಆಡು ಭಾಷೆಯಲ್ಲಿ ಸಂಜೆ ವಾಣಿ ಪತ್ರಿಕೆ ವರದಿಗಾರೊಂದಿಗೆ ಮಾತನಾಡಿದರು.
ಗುರುವಾರದಿಂದ ಆರಂಭವಾದ ಮಳೆಯಿಂದ ಜನಜೀವನ ಅಸ್ತವ್ಯಸ್ತ ವಾಗಿದೆ ಈ ಮಳೆಗೆ ವ್ಯಾಪಾರ ವಹಿವಾಟುಗಳು ಕುಂಠಿತಗೊಂಡು ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಟ್ಟಣದಲ್ಲಿ ಕೆಲ ವಸತಿ ಪ್ರದೇಶ ಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಗೊಂಡು ವಾಹನ ಸವಾರರು ಪರದಾಡಿದರು .
ಗ್ರಾಮೀಣ ಪ್ರದೇಶದ ರೈತರು ಕೃಷಿ ಚಟುವಟಿಕೆ ಸಂಬಂಧಿಸಿದಂತೆ ಬಿತ್ತನೆ ಮಾಡಿ ರೈತರ ಬಾಳಲ್ಲಿ ಈ ಮಳೆಯಿಂದ ಆಶಾಕಿರಣ ವಾಗಿರುತ್ತದೆ ಪುನರ್ವಸು ಮಳೆ ಜೋರು ಮಳೆ ಆದರೆ ರೈತರ ಬದುಕು ಹಸನಾಗುತ್ತದೆ ಎಂಬುದು ರೈತರ ಅಭಿಪ್ರಾಯ .
ಜಿಟಿ ಜಿಟಿ ಮಳೆಯಿಂದ ಸೊಳ್ಳೆ ಉತ್ಪತ್ತಿ ತಾಣಗಳು ಬೆಳೆಯದಂತೆ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಿ ಜನರ ರಕ್ಷಣೆಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ .
ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಕ್ರಮ ಕೈಗೊಳ್ಳಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಗ್ರಾಮದ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ .
ಹಟ್ಟಿ ಪಟ್ಟಣದಲ್ಲಿ ಮಳೆಯಿಂದ ಸಂಚಾರ ಅಸ್ತವ್ಯಸ್ತ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಹಟ್ಟಿ ವಲಯದಲ್ಲಿ ಜಿಟಿ ಜಿಟಿ ಮಳೆಯಿಂದ ಜನಜೀವನ ಅಸ್ತವ್ಯಸ್ತ ಹಾಗೂ ಹಟ್ಟಿ ಪಟ್ಟಣದ ರಸ್ತೆಗಳಲ್ಲಿ ನೀರು ತುಂಬಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ದೇಶಕ್ಕೆ ಚಿನ್ನ ನೀಡುವ ಏಕೈಕ ಕಂಪನಿ ಹಟ್ಟಿ ನಾಗರಿಕರಿಗೆ ಸರಿಯಾದ ರಸ್ತೆ ಇಲ್ಲ ಹಾಗೂ ಈ ಪಟ್ಟಣದ ಜನರಿಗೆ ಮೂಲಭೂತ ಸೌಕರ್ಯ ಇಲ್ಲದೆ ಜನರ ಬದುಕು ಬಹಳಷ್ಟು ದುಸ್ತರವಾಗುತ್ತಿದೆ ಆದರೆ ಚುನಾಯಿತ ಜನಪ್ರತಿನಿಧಿಗಳು ಕೇವಲ ನಾಮಕಾವಸ್ಥೆ ಕೆಲವೊಂದು ಸಲ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಲಾಗುವುದು ಎಂದು ಕೇವಲ ಭಾಷಣದ ಮೂಲಕ ಬೊಬ್ಬೆ ಹೊಡೆಯುವ ಚುನಾಯಿತ ಜನಪ್ರತಿನಿಧಿಗಳು ಇಂದು ಪಟ್ಟಣದ ಜನರಿಗೆ ಕನಿಷ್ಠ ಪಕ್ಷ ರಸ್ತೆ ಕುಡಿಯುವ ನೀರು ಇತರೆ ಮಹತ್ವಾಕಾಂಕ್ಷಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಕೂಡಲೇ ಹಟ್ಟಿ ಕಂಪೆನಿ ಅಧಿಕಾರಿಗಳು ಪಟ್ಟಣದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ನಾಗರಿಕರು ಚುನಾಯಿತ ಜನಪ್ರತಿನಿಧಿಗಳಿಗೆ ಆಗ್ರಹಿಸಿದ್ದಾರೆ .
ಕಂಪನಿ ಅಧಿಕಾರಿಗಳು ನೆನೆಗುದಿಗೆ ಬಿದ್ದಿರುವ ಕಾಕನಗರ ಸೇತುವೆ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರದಲ್ಲಿ ಸೇತುವೆ ನಿರ್ಮಾಣ ಮಾಡಿ ಜನರಿಗೆ ಸುಗಮ ಸಂಚಾರಕ್ಕೆ ಅನುವು ಮಾಡುತ್ತಾರೆ ಇಲ್ಲವೊ ಕಾದುನೋಡಬೇಕಾಗಿದೆ.?