ಮನೆಯಿಂದಲೇ ಶತಾಯುಷಿ ಮತದಾನ

ಕೆ.ಆರ್.ಪುರ, ಏ.೧೩- ಈ ಬಾರಿ ಲೋಕಸಭಾ ಚುನಾವಣೆಯಗೆ ವಯಸ್ಸಾದ ವೃದ್ಧರಿಗೆ ಮತಗಟ್ಟೆಗೆ ಬರಲಾಗುವುದಿಲ್ಲವೆಂದು, ಮನೆಯಲ್ಲೇ ಕುಳಿತು ಓಟ್ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ.ಇಂದು ಮಹದೇವಪುರ ಕ್ಷೇತ್ರದ ಮಂಡೂರಿನ ಶತಾಯುಷಿ ಗೌಡರ ಕಮಲಮ್ಮ ನಾರಾಯಣಸ್ವಾಮಿ (೧೦೩) ಅವರು ತಮ್ಮ ಮೊಮ್ಮಗ ತೇಜಸ್ ಗೌಡರೊಂದಿಗೆ ಮತದಾನ ಮಾಡಿದ್ದಾರೆ.ಶತಾಯುಷಿ ಬದುಕಿನ ಕೊನೆಯ ಕಾಲಘಟ್ಟದಲ್ಲಿ ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು.ಶತಾಯುಷಿ ಪಟೇಲರ ಕಮ್ಮಲಮ್ಮ ಅವರ ಪುತ್ರ ಶ್ರೀನಿವಾಸ್ ಗೌಡ ಅವರು ಮಾತನಾಡಿ, ಭಾರತ ದೇಶದಲ್ಲಿ ಮತದಾನ ಪ್ರಾರಂಭಗೊಂಡಾಗಿನಿಂದಲು ನಮ್ಮ ತಾಯಿ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ.ಇಂತಹ ಶತಾಯುಷಿ ಮತ ದಾರರು ನಮ್ಮ ಗ್ರಾಮದ ಹೆಮ್ಮೆ. ಮತದಾರರು ತಾವೆಲ್ಲರೂ ಇವರನ್ನು ಪ್ರೇರಣೆಯಾಗಿಟ್ಟುಕೊಂಡು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಚುನಾವಣಾಧಿಕಾರಿ ನಟರಾಜ್, ಕಮಲಮ್ಮ ಅವರ ಮಕ್ಕಳಾದ ಬಸವೇಗೌಡ, ವೆಂಕಟೇಗೌಡ, ಸೊಸೆ ಇಂದಿರಾ, ಮೊಮ್ಮಗ ತೇಜಸ್ ಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.