ಮನೆಯಿಂದಲೇ ಮತದಾನ

ಕೊಲ್ಹಾರ: ಏ.28:ಪ್ರಸಕ್ತ ನಡೆಯುತ್ತಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗ 85 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದ್ದು ಇದರ ಅಂಗವಾಗಿ ಇಂದು ಕೊಲ್ಹಾರ ತಾಲೂಕ ವ್ಯಾಪ್ತಿಯಲ್ಲಿ ಮನೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಿನಿಂದ ಜರುಗಿತು.

ಉತ್ತಮ ಪ್ರತಿಕ್ರಿಯೆ: ಅಧಿಕಾರಿಗಳು ಚುರುಕಿನಿಂದ ನೊಂದಾಯಿತ ಮತದಾರರ ಮನೆಮನೆಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸಿದರು. ಮತದಾನ ಮಾಡುವ ವಯೋವೃದ್ಧರು, ವಿಶೇಷ ಚೇತನರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.