ಮನೆಯಿಂದಲೇ ಮತದಾನ ಬೇಡ: ಶಿವಬಸಮ್ಮ,ಯಶೋದಾ ಬಾಯಿ

ಮುದಗಲ್,ಮೇ.೧೦- ಮೇ ೧೦: ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ೮೦ ವರ್ಷ ದಾಟಿದ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಈ ಬಾರಿ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ.
ಇಂದು ಲಿಂಗಸೂರು ತಾಲೂಕಿನ ಐತಿಹಾಸಿಕ ಮುದಗಲ್ಲ ಪಟ್ಟಣದ ಪುರಸಭೆಯಲ್ಲಿ ಸಖಿ ಮತಗಟ್ಟೆ ಮತಗಟ್ಟೆ ತುಂಬಾ ಹಾಗೂ ಬೂತ್ ತುಂಬಾ ಪಿಂಕ್ ಮಯಾ ಆಗಿತ್ತು ಮತಗಟ್ಟೆ ನಿಯೋಜನೆಗೊಂಡ ಮಹಿಳಾ ಸಿಬ್ಬಂದಿ ಪಿಂಕ್ ಸೀರೆ ತೊಟ್ಟಿದು ಕಂಡುಬಂದಿತ್ತು. ಮತಗಟ್ಟೆಯಲ್ಲಿ ೯೪ ವಯಸ್ಸು ದಾಟಿದ ಶಿವಬಸಮ್ಮ ೮೯ ಹಾಗೂ ಯಶೋದ ಬಾಯಿ ಹಾಗೂ ಹಿರಿಯರಾದ ರಾಮಣ್ಣ ಚಿತ್ರಗಾರ (೮೪) ವಯೋವೃದ್ಧರಾದ ಮನೆಯಿಂದಲೇ ಮತದಾನ ಮಾಡುವುದಕ್ಕೆ ನಿರಾಸಕ್ತಿ ತೋರಿಸಿ, ಇಂದು ಮತಗಟ್ಟೆಗೆ ಬಂದು ಮತದಾನ ಮಾಡಿದ್ದು ಕಂಡುಬಂದಿತು.