
ಕೋಲಾರ,ಮೇ,೩- ಜಿಲ್ಲೆಯಲ್ಲಿ ವೋಟ್ ಫ್ರಂ ಹೊಂ (ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ)ಗೆ ಅಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್‌ರಾಜಾ ರವರು ತಿಳಿಸಿದ್ದಾರೆ.
ನಮೂನೆ ೧೨-ಡಿ ಯಲ್ಲಿ ನೊಂದಾಯಿಸಿಕೊಂಡಿರುವ ೮೦ ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಇಂದು ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಇದರನ್ವಯ ಚುನಾವಣಾ ಆಯೋಗವು ಮತದಾನದಿಂದ ವಂಚಿತರಾಗುತ್ತಿದ್ದ ೮೦ ವರ್ಷ ದಾಟಿದ ಹಿರಿಯ ನಾಗರಿಕರಿಗೆ ಮನೆಗೆ ಮತಗಟ್ಟೆ ಕಳುಹಿಸಿ ಮತದಾನ ಮಾಡುವ ಅಪೂರ್ವ ವ್ಯವಸ್ಥೆಯನ್ನು ಕಲ್ಪಿಸಿತ್ತು. ಅದರಂತೆ ಜಿಲ್ಲೆಯಲ್ಲಿ ೮೦ ವರ್ಷ ಮೇಲ್ಪಟ್ಟ ೮೨೭ ಮತದಾರರಯ ಪೋಸ್ಟಲ್ ವೋಟಿಂಗ್ ಮಾಡಲು ನೋಂದಾಯಿಸಿ ಕೊಂಡಿದ್ದರು ಹಾಗೂ ೧೯೧ ವಿಶೇಷ ಚೇತನ ಮತದಾರರು ಪೋಸ್ಟಲ್ ವೋಟಿಂಗ್ ಮೂಲಕ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದರು. ಇವರಿಗೆ ಮತದಾನ ಮಾಡಲು ಜಿಲ್ಲೆಯಲ್ಲಿ ೧೦೦ ತಂಡಗಳನ್ನು ೯೩ ವಿವಿಧ ಮಾರ್ಗಗಳಲ್ಲಿ ಮಾತದಾನಕ್ಕಾಗಿ ಕಳುಹಿಸಿಕೊಡಲಾಗಿತ್ತು.
ಮತ ಕ್ಷೇತ್ರವಾರು ಮತದಾನದ ವಿವರ:
ಶ್ರೀನಿವಾಸಪುರ ವಿಧಾನ ಸಭಾ ಮತ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟ ೨೫೬ ಮತದಾರರು ಪೋಸ್ಟಲ್ ವೋಟಿಂಗ್‌ಗಾಗಿ ನೋಂದಾಯಿಸಿಕೊಂಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ ೨೩೮ ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ೩೬ ವಿಶೇಷ ಚೇತನ ಮತದಾರರು ನೋಂದಾಯಿಸಿಕೊಂಡಿದ್ದು ಇಂದು ೩೩ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.
ಮುಳಬಾಗಿಲು ವಿಧಾನಸಭಾ ಮತ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟ ೮೨ ಮತದಾರರು ಪೋಸ್ಟಲ್ ವೋಟಿಂಗ್‌ಗಾಗಿ ನೋಂದಾಯಿಸಿಕೊಂಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ ೭೮ ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ೨೧ ವಿಶೇಷ ಚೇತನ ಮತದಾರರು ನೋಂದಾಯಿಸಿಕೊಂಡಿದ್ದು ಇಂದು ೨೧ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.
ಕೆ.ಜಿ.ಎಫ್ ವಿಧಾನಸಭಾ ಮತ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟ ೧೨೬ ಮತದಾರರು ಪೋಸ್ಟಲ್ ವೋಟಿಂಗ್‌ಗಾಗಿ ನೋಂದಾಯಿಸಿಕೊಂಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ ೧೧೬ ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ೩೭ ವಿಶೇಷ ಚೇತನ ಮತದಾರರು ನೋಂದಾಯಿಸಿಕೊಂಡಿದ್ದು ಇಂದು ೩೪ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.
ವೋಟ್ ಫ್ರಂ ಹೋಮ್ ಅಡಿ ನೋಂದಾಯಿಸಿಕೊಂಡಿರುವ ಮತದಾರರಿಗೆ ಹಾಗೂ ಇಂದು ಮತದಾನ ಮಾಡಲಾಗದ ಮತದಾರರಿಗೆ ಮೇ ೦೩ ರಂದು ಪೂನಃ ಚುನಾವಣಾಧಿಕಾರಿಗಳು ಮನೆಗೆ ಮತಗಟ್ಟೆಗಳನ್ನು ಕಳುಹಿಸಲಿದ್ದಾರೆ ಆದ್ದರಿಂದ ತಪ್ಪದೆ ಮತದಾನವನ್ನು ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಮನವಿ ಮಾಡಿದ್ದರು.