ಮನೆಯಿಂದಲೇ ನಡೆದ ಮತದಾನ ಪ್ರಕ್ರಿಯೆ

ಚಾಮರಾಜನಗರ, ಏ.30:- ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದ 329 ಎಂಭತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರ ಮತದಾರರ ಪೈಕಿ 313 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 50 ಹಿರಿಯ ನಾಗರಿಕರು, 25 ವಿಶೇಷಚೇತನರು ಮತ ಚಲಾಯಿಸಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 49 ಹಿರಿಯ ನಾಗರಿಕರು, 31 ವಿಶೇಷಚೇತನರು ಮತ ಚಲಾಯಿಸಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 51 ಹಿರಿಯ ನಾಗರಿಕರು, 26 ವಿಶೇಷಚೇತನರು ಮತ ಚಲಾಯಿಸಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 59 ಹಿರಿಯ ನಾಗರಿಕರು, 22 ವಿಶೇಷಚೇತನರು ಮತ ಚಲಾಯಿಸಿದ್ದಾರೆ.
ಕೋರಿಕೆ ಅರ್ಜಿ ಸಲ್ಲಿಸಿ ನೋಂದಣಿÀಯಾದ ಅವಧಿಯ ಬಳಿಕ 8 ಮಂದಿ ಹಿರಿಯ ನಾಗರಿಕರು ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇಬ್ಬರು ಮನೆಯಲ್ಲಿ ಲಭ್ಯವಿಲ್ಲದೆ ಹೊರಗೆ ತೆರಳಿದ್ದಾರೆ. ಮೂವರು ನಿರಾಕರಿಸಿದ್ದಾರೆ. ಈ ಎಲ್ಲಾ ಉಳಿದ ಎಂಟು ಮಂದಿಗೆ ಮೇ 6ರಂದು ಮತ್ತೊಮ್ಮೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.