ಮನೆಯಿಂದಲೇ ಕೆಲಸ ಪ್ರವೃತ್ತಿಗೆ ಮಸ್ಕ್ ವಿರೋಧ

ಕ್ಯಾಲಿಫೋರ್ನಿಯಾ,ಮೇ ೧೭- ಕಚೇರಿಯಿಂದ ದೂರವಿದ್ದು ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿ ಈಗ ಸಾಮಾನ್ಯವಾಗಿದೆ.
ಐಟಿ ವಲಯದಲ್ಲಿ ಇದು ಹೆಚ್ಚು. ಆದರೆ ನೈತಿಕವಾಗಿ ಇದು ತಪ್ಪು ಎಂದು ಜಗತ್ತಿನ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಹೇಳಿದ್ದಾರೆ.
ಉದ್ಯೋಗಿಗಳು ಕಚೇರಿಯಲ್ಲಿ ತಮ್ಮ ಕೆಲಸವನ್ನು ಮಾಡಿ ತೋರಿಸಬೇಕು. ಮನೆಯಿಂದಲೇ ಕೆಲಸ ಮಾಡುವುದರಿಂದ ಉದ್ಯೋಗಿಗಳ ಉತ್ಪಾದಕತೆ ಕಡಿಮೆಯಾಗಬಹುದು.
ತೀರಾ ಅನಿವಾರ್ಯವಾದರೆ ಮಾತ್ರ ಮನೆಯಿಂದಲೇ ಕೆಲಸ ಹೋಮ್ ಮಾಡಬಹುದು ಎಂದು ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.

ಜನ ಕಾರುಗಳನ್ನು ತಯಾರಿಸುತ್ತಾರೆ. ಮನೆಗಳನ್ನು ಕಟ್ಟುತ್ತಾರೆ. ಆಹಾರವನ್ನು ಉತ್ಪಾದಿಸುತ್ತಾರೆ. ಕೃಷಿ ಮಾಡುತ್ತಾರೆ. ಅವರೆಲ್ಲರೂ ಕೆಲಸಕ್ಕೆ ಹೋಗಲೇಬೇಕಾಗುತ್ತದೆ. ಆದರೆ ನೀವು ಮನೆಯಿಂದಲೇ ಕೆಲಸ ಮಾಡಿ ಎನ್ನುವುದು ನೈತಿಕವಾಗಿ ಸರಿಯಲ್ಲ ಎಂದು ಸಂದರ್ಶನದಲ್ಲಿ ಎಲಾನ್ ಮಸ್ಕ್ ಹೇಳಿದ್ದಾರೆ.

ಎಲಾನ್ ಮಸ್ಕ್ ಅವರು ಮನೆಯಿಂದ ಕೆಲಸ ಮಾಡುವ ಪದ್ಧತಿ ಬದಲಿಗೆ ಕಚೇರಿಗೆ ಬಂದು ಕೆಲಸ ಮಾಡುವ ವ್ಯವಸ್ಥೆ ಬಗ್ಗೆ ಬಲವಾಗಿ ವಾದಿಸುತ್ತಲೇ ಬಂದಿದ್ದಾರೆ. ಟೆಸ್ಲಾದಲ್ಲಿ ಸಿಬ್ಬಂದಿಗೆ ಪ್ರತಿ ವಾರ ಕನಿಷ್ಠ ೪೦ ಗಂಟೆ ಕಚೇರಿಯಲ್ಲಿ ಇರಬೇಕು ಎಂದು ಸೂಚಿಸಲಾಗಿದೆ.