ಮನೆಯಲ್ಲೇ ಸುರಕ್ಷಿತವಾಗಿರಿ ಐಶ್ವರ್ಯಾ ಸರ್ಜಾ ಮನವಿ

ಬೆಂಗಳೂರು, ಜು 21 – ಸರ್ಜಾ ಕುಟುಂಬದಲ್ಲಿ  ಕೋವಿಡ್ ಸೋಂಕು ದೃಢವಾದ ಬೆನ್ನಲ್ಲೇ ಎಲ್ಲಾರು ಪರೀಕ್ಷೆಗೆ ಒಳಗಾಗಿದ್ದಾರೆ.
 
ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾರಲ್ಲಿ ಸೋಂಕು ದೃಢಪಟ್ಟಿದ್ದು, ಲಕ್ಷಣಗಳು ತೀವ್ರವಾಗಿಲ್ಲದ ಕಾರಣ ಮನೆಯಲ್ಲೇ ಕ್ವಾರಂಟೈನ್ ಗೆ ಒಳಪಡುವಂತೆ ವೈದ್ಯರು ಸಲಹೆ ನೀಡಿದ್ದರು. ನಂತರ ಸರ್ಜಾ ಕುಟುಂಬದ ಎಲ್ಲ ಸದಸ್ಯರೂ ಕೋವಿಡ್ ಪತ್ತೆ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾರಲ್ಲಿ ಸೋಂಕು ದೃಢಪಟ್ಟಿದೆ.
 
“ಸೋಂಕಿನ ಪ್ರಮಾಣ ಕಡಿಮೆ ಇರುವ ಕಾರಣ, ಮನೆಯಲ್ಲೇ ಪ್ರತ್ಯೇಕವಾಗಿರಲು ವೈದ್ಯರು ಸೂಚಿಸಿದ್ದಾರೆ.  ಕೋವಿಡ್ ಗೆ ಯಾರೂ ಹೆದರಬೇಕಿಲ್ಲ.  ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ.  ಮನೆಯಲ್ಲೇ ಸುರಕ್ಷಿತವಾಗಿರಿ” ಎಂದು ಐಶ್ವರ್ಯಾ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.