ಮನೆಯಲ್ಲೇ ಮತದಾನ ಮಾಡಿದ  85ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.28 :- ಪ್ರಜಾಪ್ರಭುತ್ವದ ಸಂವಿಧಾನಿಕ ಹಕ್ಕಾಗಿರುವ ಮತದಾನದಿಂದ ಯಾವುದೇ ಮತದಾರರು ವಂಚಿತರಾಗಬಾರದೆನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಲೋಕಸಭಾ – ಚುನಾವಣಾ ಹಿನ್ನಲೆಯಲ್ಲಿ ” 85ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ಹಾಗೂ ವಿಶೇಷಚೇತನ  ಮತದಾರರಿಗೆ ಮತಗಟ್ಟೆಗೆ ಬಂದು ಮತದಾನ ಮಾಡಲು ನಿಶಕ್ತರಾಗಿರುವವರನ್ನು ಮತಗಟ್ಟೆಯ ಬಿಎಲ್ ಓ ಗಳು ಈಗಾಗಲೇ  ಗುರುತಿಸಿದ್ದು  ನಮೂನೆ 12ಡಿ ಪತ್ರದ ಎ ಮೂಲಕ ಮನೆಯಲ್ಲೇ ಮತ ಚಲಾವಣೆ ಮಾಡುವ ಅವಕಾಶವಿದ್ದು ಇಂದಿನಿಂದ ಮೂರುದಿನ ಮನೆಮನೆಗೆ ಮತದಾನ ಮಾಡಿಸಿಕೊಂಡು ಬರುವ ಕಾರ್ಯಕ್ರಮಕ್ಕೆ  ಕೂಡ್ಲಿಗಿ 96ವಿಧಾನಸಭಾ ಮತ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ ಎಚ್ ಎನ್ ರಘು  10ರೂಟ್ ಗಳಿಗೆ 60ಸಿಬ್ಬಂದಿಗಳನ್ನು ನೇಮಕ ಮಾಡಿ  ಕಳುಹಿಸಿದ್ದಾರೆ.
ಮೇ 7ರಂದು ನಡೆಯುವ ಚುನಾವಣೆಯ ಬಳ್ಳಾರಿ ಲೋಕಸಭಾ  ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ವಿಶೇಷಚೇತನ  ಮತದಾರರು ಮನೆಯಲ್ಲೇ ಹಾಕುವ ಅವಕಾಶವಿದೆ ನಮೂನೆ 12ಡಿ ಪತ್ರವನ್ನು ಪಡೆದು ಕೊಂಡು ಮನೆಯಲ್ಲಿರುವ ವಯಸ್ಸಾದ  ನಿಶಕ್ತ ಮತದಾರರು ಇದರ ಉಪಯೋಗ ಪಡೆದು ತಪ್ಪದೆ ಮತ ಚಲಾಯಿಸುವಂತೆ ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್.ರಘು ಜನರಲ್ಲಿ ಮನವಿ ಮಾಡಿದ್ದಾರೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ 85ವರ್ಷ ಮೇಲ್ಪಟ್ಟವರು 104 ಮತದಾರರು ಹಾಗೂ ವಿಶೇಷಚೇತನರು 102 ಸೇರಿ ಒಟ್ಟು 206 ಮತದಾರರಿದ್ದು ಮನೆಮನೆಗೆ ತೆರಳಿ ಅವರಿಂದ ಮನೆಯಲ್ಲೇ  ಮತದಾನ  ಮಾಡಿಸಿಕೊಂಡು ಬರುವುದಕ್ಕೆ 10ರೂಟ್ ಗಳಲ್ಲಿ 60ಸಿಬ್ಬಂದಿಗಳನ್ನು ನೇಮಕ ಮಾಡಲಾಗಿ  ಇಂದು ಬೆಳಿಗ್ಗೆ  ಕೂಡ್ಲಿಗಿ ಪಟ್ಟಣದ ಬೂತ್ ನಂಬರ್ 53ರ ಮತಗಟ್ಟೆಗೆ ಸಂಬಂಧಿಸಿದಂತೆ  103 ವರ್ಷ ವಯಸ್ಸಿನ ಬಂಡೆಮ್ಮ ಅವರ ನಿವಾಸಕ್ಕೆ
ಹೋಗಿ ಮತದಾನ ಮಾಡಿಸಿಕೊಂಡು ಬರಲಾಯಿತು ಅಲ್ಲದೆ ಪಟ್ಟಣದ ಮತಗಟ್ಟೆ 33ರ ಹನುಮಂತಪ್ಪ ಹಾಗೂ ಹಿರೇಹೆಗ್ದಾಳ್ ಗ್ರಾಮದ ವೃದ್ದೆಯೊಬ್ಬರು ಇಂದು  ಮನೆಯಲ್ಲೇ ಮತಚಲಾಯಿಸಿದರು
ಈ ಸಂದರ್ಭದಲ್ಲಿ ಹೋಮ್ ಓಟಿಂಗ್ ಗೆ ನೇಮಿಸಿದ ಸಿಬ್ಬಂದಿಗಳು ಹಾಗೂ ಬಿಎಲ್ ಓ ಗಳು ಉಪಸ್ಥಿತರಿದ್ದರು.