ಮನೆಯಲ್ಲೇ ಕೆಲಸ ಮಾಡುವ ವೇಳೆ ಪಾಲಿಸಬೇಕಾದ `ಸಪ್ತಸೂತ್ರ’ಗಳು

ಕೋವಿಡ್-19 ಕಾರ್ಪೊರೇಟ್ ಜೀವನ ಶೈಲಿಯಲ್ಲಿ ಅದರಲ್ಲೂ ವಿಶೇಷವಾಗಿ ಕಾರ್ಯ ಮತ್ತು ಕಾರ್ಯ ನಿರ್ವಹಿಸುವ ಸ್ಥಳಗಳ ವಿಚಾರದಲ್ಲಿನ ಭಾರೀ ಬದಲಾವಣೆ ತಂದಿದೆ. ರಿಮೋಟ್ ವರ್ಕಿಂಗ್ ಎಂಬ ಪರಿಕಲ್ಪನೆಯು ಪ್ರತಿಯೊಬ್ಬರೂ ಬಳಸಿದ ವಿಚಾರವಾಗಿದೆ ಮತ್ತು  ಭವಿಷ್ಯದಲ್ಲಿ ಸಿಬ್ಬಂದಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಆದರೆ, ಹೆಚ್ಚು ಹೆಚ್ಚು ಆನ್ ಲೈನ್ ಬಳಕೆ ಆಗುತ್ತಿರುವುದು ಸೈಬರ್ ಬೆದರಿಕೆಗಳು ಹೆಚ್ಚಾಗಲು ಕಾರಣವಾಗಬಲ್ಲದು. ವ್ಯಕ್ತಿಗತವಾಗಿ ರಿಮೋಟ್ ವರ್ಕ್ ಗೆ ಅವಕಾಶ ನೀಡುವ ಆಯ್ಕೆಗಳನ್ನು ಹುಡುಕುತ್ತಿದ್ದೆ, ಸೈಬರ್ ಸುರಕ್ಷತೆ ಮತ್ತು ಡೇಟಾ ಸಂರಕ್ಷಣೆ ಮಾಡುವ ಸಾಧನಗಳನ್ನು ಹೊಂದುವ ಬಗ್ಗೆ ಅವರು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಈ ವಿಚಾರದಲ್ಲಿ ಕಳೆದ ಕೆಲವು ತಿಂಗಳಲ್ಲಿ ಜಗತ್ತಿನಲ್ಲಿ ಉದ್ದೇಶಿತವಾದ ಡೇಟಾಗಳ ಉಲ್ಲಂಘನೆಗಳ ಮೂಲಕ ಹೆಚ್ಚಿನ ದುರ್ಬಲತೆಯನ್ನು ಕಂಡಿದ್ದೇವೆ. ಐಡೆಂಟಿಟಿ ಕಳ್ಳತನ, ಡೇಟಾ ಉಲ್ಲಂಘನೆ- ಕಳ್ಳತನ ಮತ್ತು ಆನ್ ಲೈನ್ ವಂಚನೆ ಮತ್ತು ಇನ್ನಿತರೆ ಮಾದರಿಯಲ್ಲಿ ಸೈಬರ್ ಅಪರಾಧಗಳು ನಡೆಯುತ್ತಿವೆ.

ನಾರ್ಟನ್ ಲೈಫ್ ಲಾಕ್ ಸೈಬರ್ ಸೇಫ್ಟಿ ಇನ್ ಸೈಟ್ಸ್ ರಿಪೋರ್ಟ್ 2019 ರ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಐಡೆಂಟಿಟಿ ಕಳ್ಳತನ ಆಗಿದೆ ಎಂದು ಭಾರತದಲ್ಲಿನ ಶೇ.39 ಮಂದಿ  ಪ್ರತಿಕ್ರಿಯೆ ನೀಡಿದ್ದಾರೆ. 2020 ಅನೇಕ ಬಳಕೆದಾರರಿಗೆ ಕಣ್ಣು ತೆರೆಸಿದ ವರ್ಷವಾಗಿದೆ. ಇವರಿಗೆ ಸೈಬರ್ ಭದ್ರತೆಯ ಅಪಾಯಗಳ ಬಗ್ಗೆ ಗೊತ್ತೇ ಇಲ್ಲ ಮತ್ತು ಅವರು ಸೈಬರ್ ವಂಚಕರು ತಮ್ಮನ್ನು ಗುರಿಯಾಗಿಸುತ್ತಾರೆ ಎಂಬುದನ್ನು ನಿರೀಕ್ಷಿಸಿಯೇ ಇಲ್ಲ.

ರಿಮೋಟ್ ನಲ್ಲಿ ಅಥವಾ ಕಚೇರಿಯಿಂದ ದೂರವಿದ್ದುಕೊಂಡು ಕೆಲಸ ಮಾಡುವವರು ಸೈಬರ್ ಭದ್ರತೆಗೆ ತೆಗೆದುಕೊಳ್ಳಬೇಕಾದ 7 ಅಂಶಗಳನ್ನು ಪರಿಣತರು ಶಿಫಾರಸು ಮಾಡಿದ್ದಾರೆ:-
*ಉದ್ಯೋಗದಾತರ ಜತೆ ನಿಕಟ ಸಂಪರ್ಕದಲ್ಲಿರಿ
ಕಂಪನಿಯ ಇಂಟ್ರಾನೆಟ್ ನಲ್ಲಿ ನಿಮ್ಮ ಉದ್ಯೋಗದಾತರು ಕೊರೋನಾವೈರಸ್ ಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕುತ್ತಿರಬಹುದು. ನಿಮಗೆ, ನಿಮ್ಮ ಸಹೋದ್ಯೋಗಿಗಳಿಗೆ ಮತ್ತು ವ್ಯವಹಾರ ಸುರಕ್ಷಿತವಾಗಿ ನಡೆಯಬೇಕಾದರೆ ಹೊಸ ನೀತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿದೆ.
*ಕಂಪನಿಯ ಟೂಲ್ ಬಾಕ್ಸ್ ಟೆಕ್ ಅನ್ನು ಬಳಕೆ ಮಾಡಿ
ನೀವು ಮನೆಯಿಂದ ಕೆಲಸ ಮಾಡುತ್ತಿರುವ ವೇಳೆ ಕಂಪನಿಗಳು ಹೊಂದಿರುವ ಟೆಕ್ ಟೂಲ್ ಗಳು ನಿಮ್ಮ ಸೈಬರ್ ಸುರಕ್ಷತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಫೈರ್ ವೆಲ್ ಮತ್ತು ಆ್ಯಂಟಿವೈರಸ್ ರಕ್ಷಣೆಯನ್ನು ನೀಡುತ್ತವೆ. ಇವುಗಳೊಂದಿಗೆ ವಿಪಿಎನ್ ಮತ್ತು 2-ಫ್ಯಾಕ್ಟರ್ ಅಥೆಂಟಿಕೇಶನ್ ನಂತಹ ಭದ್ರತಾ ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ.
 *ಸುಧಾರಣೆಗೆ ಪ್ರಚೋದನೆಯನ್ನು ನಿಯಂತ್ರಣ ಮಾಡಿ
ಉದ್ಯೋಗಿಗಳು ಹೆಚ್ಚು ತಂಡಗಳಾಗಿ ಕಾರ್ಯನಿರ್ವಹಣೆ ಮಾಡುತ್ತಾರೆ, ಮತ್ತು ಇನ್ಸ್ ಸ್ಟಂಟ್ ಮೆಸೇಜಿಂಗ್ ಪ್ಲಾಟ್ ಫಾರ್ಮ್ ಗಳು ಮತ್ತು ವಿಡಿಯೋ ಮೀಟಿಂಗ್ ರೂಂನಂತಹ ಸಹಭಾಗಿತ್ವದ ಟೂಲ್ ಗಳನ್ನು ಬಳಸುತ್ತಾರೆ. ಒಂದು ವೇಳೆ ಟೂಲ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ, ಇದಕ್ಕೆ ಪರ್ಯಾಯವಾಗಿ ಮತ್ತೊಂದನ್ನು ಡೌನ್ ಲೋಡ್ ಮಾಡಲು ನಿಮ್ಮನ್ನು ಪ್ರಚೋದಿಸುತ್ತದೆ. ಸುರಕ್ಷತಾ ನ್ಯೂನತೆಯಿಂದ ನೀವು ಸಾಫ್ಟ್ ವೇರ್ ಪ್ರೋಗ್ರಾಂ ಅನ್ನು ಅಜಾಗರೂಕತೆಯಿಂದ ಪರಿಚಯಿಸಬಹುದು ಮತ್ತು ಇದರರ್ಥ ಅನಧಿಕೃತವಾಗಿ ಯಾರಾದರೂ ಕಂಪನಿಯ ಡೇಟಾವನ್ನು ಅಥವಾ ಡಿವೈಸ್ ನಲ್ಲಿ ನೀವು ಹೊಂದಿರುವ ಯಾವುದೇ ವೈಕ್ತಿಕ ಡೇಟಾವನ್ನು ವೀಕ್ಷಿಸಲು ಅಥವಾ ಕಳ್ಳತನ ಮಾಡಲು ಸಾಧ್ಯವಾಗುತ್ತದೆ.
*ಸಾಫ್ಟ್ ವೇರ್ ಮತ್ತು ಪ್ಯಾಚಸ್ ಅನ್ನು ಅಪ್ ಡೇಟ್ ಮಾಡುತ್ತಿರಿ
ನಿಮ್ಮ ಡಿವೈಸ್ ಅಥವಾ ಸಾಧನಗಳಲ್ಲಿನ ಸಾಫ್ಟ್ ವೇರ್ ಗಳನ್ನು ಅಪ್ ಡೇಟ್ ಮಾಡುವಂತೆ ನಿಮಗೆ ರಿಮೈಂಡರ್ ಗಳು ಬರುತ್ತಿರುತ್ತವೆ. ಈ ಅಪ್ ಡೇಟ್ ಮಾಡುವುದರಿಂದ ಸುರಕ್ಷತಾ ನ್ಯೂನತೆಗಳನ್ನು ಗುರುತಿಸಲು ಮತ್ತು ನಿಮ್ಮ ಡೇಟಾವನ್ನು ರಕ್ಷಿಸಲು ನೆರವಾಗುತ್ತದೆ.
*ವಿಪಿಎನ್ ಅನ್ನು ಆನ್ ಆಗಿರುವಂತೆ ನೋಡಿಕೊಳ್ಳಿ
ವಿಪಿಎನ್- ವರ್ಚುವಲ್ ಪ್ರೈವೇಟ್ ನೆಟ್ ವರ್ಕ್ ಗೆ ಇದು ಚಿಕ್ಕದಾಗಿದೆ. ಡೇಟಾವನ್ನು ಎನ್ ಕ್ರಿಪ್ಟ್ ಮಾಡುವ ಮೂಲಕ ಉದ್ಯೋಗಿಗಳು ಮತ್ತು ವ್ಯವಹಾರಗಳ ನಡುವೆ ಸುರಕ್ಷಿತವಾದ ಸಂಪರ್ಕವನ್ನು ಕಲ್ಪಿಸುತ್ತದೆ. ಸೈಬರ್ ಅಪರಾಧಿಗಳು ಅಥವ ಪ್ರತಿಸ್ಪರ್ಧಿಗಳಿಂದ ನಿಮ್ಮ ಮಾಹಿತಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಈ ವಿಪಿಎನ್ ನೆರವಾಗುತ್ತದೆ.
*ಕೊರೋನಾ ವೈರಸ್- ವಿಷಯದ ಫಿಶಿಂಗ್ ಇಮೇಲ್ ಗಳ ಕುರಿತು ಜಾಗರೂಕರಾಗಿರಿ
ಸೈಬರ್ ಅಪರಾಧಿಗಳು ಕೊರೋನಾವೈರಸ್ ವಿಚಾರವನ್ನು ಬಳಸಿಕೊಂಡು ಉದ್ಯೋಗಿಗಳಿಗೆ ಅಪಾಯಕಾರಿ ಲಿಂಕ್ ಗಳನ್ನು ಒಳಗೊಂಡ ನಕಲಿ ಇಮೇಲ್ ಗಳನ್ನು ಕಳುಹಿಸುತ್ತಾರೆ. ಈ ಅನಾಮಧೇಯ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಡಿವೈಸ್ ನಲ್ಲಿ ಮಾಲ್ವೇರ್ ಡೌನ್ ಲೋಡ್ ಆಗುತ್ತದೆ. ತಕ್ಷಣ ನಿಮ್ಮ ಉದ್ಯೋಗದಾತನಿಗೆ ಫಿಶಿಂಗ್ ಅಟೆಂಪ್ಟ್ ರಿಪೋರ್ಟ್ ಹೋಗುತ್ತದೆ. ಈ ದೋಷಪೂರಿತ ಸಾಫ್ಟ್ ವೇರ್ ಹೊಂದಿದ ಫಿಶಿಂಗ್ ಇಮೇಲ್ ಸೈಬರ್ ಅಪರಾಧಿಗಳು ನಿಮ್ಮ ಕಂಪ್ಯೂಟರ್ ಮೇಲೆ ಹಿಡಿತ ಸಾಧಿಸಲು ಅವಕಾಶ ಕಲ್ಪಿಸುತ್ತದೆ. ಈ ಮೂಲಕ ಸೈಬರ್ ಅಪರಾಧಿಗಳು ನಿಮ್ಮ ಕಂಪ್ಯೂಟರಿನಲ್ಲಿರುವ ಸೂಕ್ಷ್ಮವಾದ ವ್ಯವಹಾರ ಮಾಹಿತಿ ಮತ್ತು ಹಣಕಾಸು ಡೇಟಾಗಳನ್ನು ಕದಿಯಬಹುದಾಗಿದೆ.
*ಹೊಸ ದಿನಚರಿಯನ್ನು ಅಭಿವೃದ್ಧಿಪಡಿಸಿ
ಮನೆಯಲ್ಲಿ ಕೆಲಸ ಮಾಡುವುದರಿಂದ ನಿಮ್ಮ ದಿನಚರಿಯನ್ನು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಆದರೆ, ಕೆಲಸದ ಕಾರ್ಯಕ್ಷಮತೆ ಮತ್ತು ನಿಮ್ಮ ತಂಡದೊಂದಿಗೆ ಸಂಪರ್ಕವನ್ನು ನಿರ್ವಹಣೆ ಮಾಡುವ ಒಂದು ರಚನಾತ್ಮಕ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಅದು ಸಂಭವಿಸುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ನಿಮ್ಮ ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಿ.