ಮನೆಯಲ್ಲೇ ಕರಕುಶಲ ಮಾಡುವುದರಿಂದ ಆರ್ಥಿಕ ವೃದ್ಧಿ

ಸಂಜೆವಾಣಿ ನ್ಯೂಸ್
ಮೈಸೂರು.ಡಿ.11: ಇಂದಿನ ದಿನಗಳಲ್ಲಿ ಒಬ್ಬರೇ ದುಡಿದರೆ ಸಾಲದು, ಮಹಿಳೆಯರು ಸಹ, ಜೀವನ ನಿರ್ವಹಣೆಗೆ ಕುಟುಂಬದವರ ಜತೆ ಕೈ ಜೋಡಿಸುವುದರ ಜೊತೆಗೆ ಮೇಣದ ಬತ್ತಿ ತರಬೇತಿ ಪಡೆದು ಮನೆಯಲ್ಲಿಯೇ ಇದ್ದುಕೊಂಡು ಅನೇಕ ಕರಕುಶಲಗಳನ್ನು ಮಾಡುವುದರಿಂದ ಇದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದು ಶಾಸಕ ಕೆ ಹರೀಶ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಕುಲಂ 3 ನೇ ಹಂತದಲ್ಲಿರುವ ಸಮೃದ್ಧಿ ಟ್ರಸ್ಟ್ ಕಚೇರಿ ಆವರಣದಲ್ಲಿ ಭಾನುವಾರ ಅಯೋಜಿಸಿದ್ದ ವಿವಿಧ ಬಗೆಯ ಕ್ಯಾಂಡಲ್ ಮೇಕಿಂಗ್ ಒಂದು ದಿನದ ಕಾರ್ಯಾಗಾರದ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಕೈಯಿಂದ ತಯಾರಿಸಿದ ಮತ್ತು ನೈಸರ್ಗಿಕ ಮೇಣದಬತ್ತಿಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ನಮ್ಮ ಮೈಸೂರಿನಲ್ಲಿ ಮೇಣದಬತ್ತಿಗಳನ್ನು ತಯಾರಿಸುವ ವ್ಯವಹಾರವನ್ನು ಪ್ರಾರಂಭಿಸುವುದು ಲಾಭದಾಯಕ ಮತ್ತು ಪೂರೈಸುವ ಉದ್ಯಮವಾಗಿದ್ದು ಸಂಶೋಧನೆ, ಯೋಜನೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ವೈದ್ಯ ಡಾ ವಿ ಶುಶೃತ್ ಗೌಡ, ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ಮೂರ್ತಿ, ಮೈಸೂರು ನಗರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ ಈಶ್ವರ್ ಚಕ್ಕಡಿ, ಸಮಾಜ ಸೇವಕ ಸುಶೀಲ ಮರೀಗೌಡ, ಭಾನು ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಚ್ ಎಸ್ ಕೋಳಾಲಗೌಡ, ಉಪಾಧ್ಯಕ್ಷ ಪಿ ಕೆ ಹೇಮಂತ್, ನಿರ್ಧೇಶಕ ಜೆ ಕುಶಾಲ್, ಎಂ ವಿ ಪ್ರಾಪರ್ಟೀಸ್ ಮತ್ತು ಡೆವಲಪರ್ಸ್ ಮುಖ್ಯಸ್ಥ ಮಹಮ್ಮದ್ ಇನಾಯತ್ ಉಲ್ಲಾ, ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ, ದಿನೇಶ್, ಮಂಜುನಾಥ್, ಸಮೃದ್ದಿ ಟ್ರಸ್ಟ್ ಅಧ್ಯಕ್ಷ ಬಿ ಗಿರಿಜಾಂಬ, ಸಂಪನ್ಮೂಲ ತರಬೇತಿದಾರರಾದ ಸಿ ಎನ್ ಮಮತಾ, ಇದ್ದರು.