ಮನೆಯಲ್ಲೇ ಇರಿ ಜಾಗೃತರಾಗಿರಿ

ಚಿತ್ರದುರ್ಗ. ಮೇ.೩೦; ದಿನ ಬಿಟ್ಟು ದಿನ ಲಾಕ್ ಡೌನ್ ಇರುವುದರಿಂದ ಜನರ ಮನಸ್ಸಿಗೆ ಕಿರಿಕಿರಿಯಾಗುತ್ತಿದ್ದು, ಕೊರೋನ ಮಾರಿ ಎಂದು ತಮ್ಮನ್ನು ಬಿಡುಗಡೆಗೊಳಿಸುತ್ತದೆಯೋ ಎಂಬ ಭಾವನೆಗಳನ್ನ ಹೊಂದುತ್ತಿದ್ದಾರೆ. ಅವರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸಮಾಡಬೇಕಾಗಿದೆ. ಅವರನ್ನ ಮನೆಯಲ್ಲೇ ನೆಮ್ಮದಿ ಮತ್ತು ಶಾಂತಿಯಿಂದ ಇದ್ದು, ಕೊರೋನದ ವಿರುದ್ಧ ಹೋರಾಡುವ ಮಾರ್ಗೋಪಾಯಗಳನ್ನ ಕಂಡುಹಿಡಿದು ಕೊಳ್ಳಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ “ಮನೆಯಲ್ಲೇ ಇರಿ, ಜಾಗ್ರತರಾಗಿರಿ” ಎಂಬ ಕರೋನ ವಿರುದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ದೈಹಿಕ ಶ್ರಮದಿಂದ ವಂಚಿತರಾದAತಹ ಜನರ ಆರೋಗ್ಯ ಹದಗೆಡವುದರಿಂದ, ಅವರು ಸಕ್ಕರೆ ಕಾಯಿಲೆ, ರಕ್ತದೊತ್ತಡ, ಸಂಧಿ ನೋವುಗಳು, ಮುಂತಾದ ಕಾಯಿಲೆಗಳಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಯುವಕರಿಗೆ ಮಾಂಸ ಖಂಡಗಳ ಸೆಳೆತ, ಮಾನಸಿಕ ಖಿನ್ನತೆ, ಮುಂತಾದ ತೊಂದರೆಗಳು ಸಹ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅದಕ್ಕಾಗಿ ಸುತ್ತಮುತ್ತಲ ವಾತಾವರಣದಲ್ಲಿ, ಜನರ ಮನಸ್ಸು ಹಗುರವಾಗುವಂತಹ ಕಾರ್ಯಕ್ರಮಗಳನ್ನ ಮನೆಯ ಗೇಟಿನ ಬಳಿ, ಮನೆಯ ತಾರಸಿಯ ಮೇಲೆ ಚಿತ್ರ ಪ್ರದರ್ಶನ, ಹಾಡುಗಾರಿಕೆ, ಗಾಯನ, ನೃತ್ಯ, ಮುಂತಾದ ಮಾಧ್ಯಮಗಳ ಮುಖಾಂತರ ಜನರ ಮನಸ್ಸನ್ನ ಬೇರೆಡೆಗೆ ಸೆಳೆಯುವ ಪ್ರಯತ್ನಗಳಾಗಬೇಕು. ರೋಗಕ್ಕೆ ಹೆದರಿ ಕುಬ್ಜರಾಗುವುದಕ್ಕಿಂತ, ಅದನ್ನ ಎದುರಿಸುವ ದಾರಿಗಳ ಅನ್ವೇ಼ಷಣೆಯಾಗಬೇಕು ಎಂದರು.ಮನೆಯ ಬಳಿಯೇ ನಿಂತು ಕಾರ್ಯಕ್ರಮದಲ್ಲಿ ವೀಕ್ಷಿಸಿದ ಶ್ರೀಮತಿ ಉಮಾದೇವಿ, ನಾಗರಾಜ್, ಮಲ್ಲನಕಟ್ಟೆ ಚಂದ್ರಪ್ಪ, ಅಂಶುಲ್, ಸುಮಾ ಕೆಂಚರೆಡ್ಡಿ, ಮನ್ವಿತ್, ಗಗನ, ಜಿ. ಭಾರತಿ, ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.