ಮನೆಯಲ್ಲಿ ಸಂಗ್ರಹಿಸಿದ್ದ ೨೦.೯೩ ಲಕ್ಷ ಜಪ್ತಿ

ಕೋಲಾರ,ಏ.೧೭- ಕರ್ನಾಟಕ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೋಲಾರದಲ್ಲಿ ದಾಖಲೆಯಿಲ್ಲದೆ ಸಂಗ್ರಹಿಸಿ ಇಟ್ಟಿದ್ದ ೨೦೯೩೫೦೦ ಹಣ ಜಪ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.
ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗ ಕೋಲಾರ ಜಿಲ್ಲೆಯ ನಾಗರಾಜ್ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ೨೦೯೩೫೦೦ ಹಣ ಜಪ್ತಿ ಮಾಡಲಾಗಿದೆ.
ಕೋಲಾರ ಚುನಾವಣಾಧಿಕಾರಿ ಹರ್ಷವರ್ಧನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಆದಾಯ ತೆರೆಗೆ ಇಲಾಖೆ ಅಧಿಕಾರಿಗಳಿಂದ ಮೂಲದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.