ಮನೆಯಲ್ಲಿ ಪುಸ್ತಕ ಇದ್ದರೆ ಸರಸ್ವತಿ ಇದ್ದಂತೆ: ಹೆಬ್ಬಾಳೆ

ಬೀದರ್ ಏ. 25:ಮನೆಯಲ್ಲಿ ಪುಸ್ತಕ ಇದ್ದರೆ ಸರಸ್ವತಿ ಇದ್ದಂತೆ, ಮನುಷ್ಯನ ಬದುಕಿಗೆ ಪುಸ್ತಕಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಜಾನಪದ ವಿಶ್ವ ವಿದ್ಯಾಲಯ ಅಧ್ಯಯನ ಕೇಂದ್ರದ ಸಂಯೋಜನಾದಿಕಾರಿ ಡಾ. ಜಗನ್ನಾಥ ಹೆಬ್ಬಾಳೆ ನುಡಿದರು.
ಅವರು ಸೋಮವಾರ ನಗರದ ಜಾನಪದ ಪ್ರಾದೇಶಿಕ ಕೇಂದ್ರದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಕರ್ನಾಟಕ ಪುಸ್ತಕ ಪ್ರಾ„ಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಿಂದ ಆಯೋಜಿಸಿದ್ದ ವಿಶ್ವ ಪುಸ್ತಕ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಶ್ವಕ್ಕೆ e್ಞÁನದ ಬೆಳಕನ್ನು ನೀಡಿದ ಸೆಕ್ಸಪಿಯರ್ ಅವರು ಎಲ್ಲ ಕ್ಷೇತ್ರಗಳಲ್ಲಿ ಪುಸ್ತಕ ಬರೆದಿದ್ದಾರೆ ಅವರ ಜನ್ಮದಿನ ಹಾಗೂ ಮರಣ ದಿನಾಂಕ ಏಪ್ರೀಲ್ 23 ರಂದು ಆಗಿರುವುದರಿಂದ ಆ ದಿನವನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತಿದೆ ಇದನ್ನು 1995ರಲ್ಲಿ ಯುನಿಸ್ಕೋ ಕೂಡ ಆದೇಶ ಹೊರಡಿಸಿದ್ದರಿಂದ ಪ್ರತಿ ವರ್ಷ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ನಾವು ಯಾವ ಕ್ಷೇತ್ರದಲ್ಲಿದ್ದರೂ ಕೂಡ ಪರಿಪೂರ್ಣ ವ್ಯಕ್ತಿತ್ವ ಹೊಂದವರಲ್ಲ ಎಂದು ಸರ್ªÀಜ್ಞ ಹೇಳಿದ್ದಾನೆ ಹೀಗಾಗಿ ನಾವು ಸದಾ ಕಾಲ ಪುಸ್ತಕಗಳನ್ನು ಓದುತ್ತಿರಬೇಕೆಂದರು. ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಅವರ ಕೊಡುಗೆ ಕೂಡ ನಾಟಕ ಕ್ಷೇತ್ರದಲ್ಲಿ ನಮ್ಮ ನಾಡಿಗೆ ಬಹಳಷ್ಟಿದೆ. ಪುಸ್ತಕಗಳ e್ಞÁನದಿಂದಲೆ ಡಾ. ಅಂಬೇಡ್ಕರರು ಇಡೀ ವಿಶ್ವದ ಗಮನ ಸೆಳೆಯಲು ಕಾರಣವಾಗಿದೆ. ಪುಸ್ತಕಗಳು ಒಳ್ಳೆಯ ಗೆಳೆಯರಿದ್ದಂತೆ, ಯಾರು ಬೇಕಾದವರು e್ಞÁನ ಪಡೆಯಬಹುದು.
ಉತ್ತಮ ಗ್ರಂಥಗಳು ನಾಡಿನ ಸಂಸ್ಕøತಿ ಬೆಳೆಸುತ್ತವೆ ಹೀಗಾಗಿ ಜೀವನದಲ್ಲಿ ಕೋರಗು ಇದ್ದಾಗ ಒಳ್ಳೆಯ ಪುಸ್ತಕ ಓದಿದರೆ ಜೀವನದಲ್ಲಿರುವ ಕೋರಗು ಮಾಯವಾಗುತ್ತದೆ. ಪುಸ್ತಕಗಳನ್ನು ಪ್ರೀತಿಸಿದರೆ ಯಾರ ಅವಶ್ಯಕತೆಯು ಇರಲ್ಲ ಎಂದು ತಿಳಿಸಿದರು.
ರಾಮಾಯಣ, ಮಹಾಭಾರತ ವಿಶ್ವದ ಅತಿ ದೊಡ್ಡ ಗ್ರಂಥಗಳಾಗಿವೆ. ಶಾಸನಗಳು ಸಾಯುತ್ತವೆ ಆದರೆ ಪುಸ್ತಕಗಳಿಗೆ ಸಾವಿಲ್ಲ. ಪುಸ್ತಕಗಳು ನಮ್ಮನ್ನು ರೂಪಿಸುತ್ತವೆ ಎಂದು ವಿವಿಧ ಲೇಖಕರು ಹೇಳಿದ ಮಾತುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ರಾಜ್ಯ ಸರಕಾರ ಕೂಡ ಈಗ ಪುಸ್ತಕಕ್ಕೆ ಹೆಚ್ಚಿನ ಒತ್ತು ನೀಡಿ ಸರಕಾರಿ ಕಾರ್ಯಕ್ರಮಗಳಲ್ಲಿ ಹಾರ-ತುರಾಯಿ ಬದಲಾಗಿ ಪುಸ್ತಕಗಳನ್ನು ನೀಡಿ ಎಂದು ಆದೇಶ ಹೊರಡಿಸಿದೆ. ಹೀಗಾಗಿ ಮನೆಗಳಲ್ಲಿ ಪುಸ್ತಕದ ಭಂಡಾರ ಇಡಬೇಕು ಇದರಿಂದ ಮುಂದಿನ ಪೀಳಿಗೆಗೆ ಪ್ರಯೋಜನವಾಗುತ್ತದೆ ಎಂದು ಹೆಬ್ಬಾಳೆ ನುಡಿದರು.
ಡಾ. ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕ ಮಾತನಾಡಿ, ಒಂದು ತಲೆಮಾರಿನಿಂದ ಇನ್ನೋಂದು ತಲೆಮಾರಿಗೆ ತಿಳಿಸಲು ಪುಸ್ತಕಗಳು ಸಹಕಾರಿಯಾಗುತ್ತವೆ. ವ್ಯಕ್ತಿಯ ಕೊಲೆಗೈಯ್ಯಬಹುದು ಆದರೆ ಪುಸ್ತಕದಲ್ಲಿರುವ ಚಿಂತನೆಗಳಿಗೆ ಎಂದು ಸಾವಿಲ್ಲ ಎಂದರು.
ಡಾ. ಅಂಬೇಡ್ಕರರು ದೊಡ್ಡ ವಿಧ್ವಾಂಸರಾಗಲು ಪುಸ್ತಕಗಳ ಪಾತ್ರ ಮುಖ್ಯವಾಗಿದೆ. ಆದರೆ ಇಂದು ಮೊಬೈಲ್‍ಗಳ ಹಾವಳಿಯಿಂದ ಪುಸ್ತಕಗಳು ಮಾಯವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಏನೆ ಆಗಲಿ ಮನೆಯಲ್ಲಿ ಚಿಕ್ಕ ಗ್ರಂಥಲಾಯ ಇರಲಿ ಎಂದರು.
ಸಮಾರಂಭದಲ್ಲಿ ಡಾ. ಮಲ್ಲಿಕಾರ್ಜುನ, ಶಿವಶರಣಪ್ಪ ಗಣೇಶಪೂರ, ಡಾ. ಗೋರಖನಾಥ, ಶ್ರೀಧರ ಜಾಧವ ಇದ್ದರು.
ಸಂಘದ ಕಾರ್ಯದರ್ಶಿ ನೀಜಲಿಂಗಪ್ಪ ತಗಾರೆ ಸ್ವಾಗತಿಸಿದರು, ಎಸ್‍ಬಿ ಕುಚಬಾಳ ನಿರೂಪಿಸಿದರೆ, ಡಾ. ಸಾವಿತ್ರಿಬಾಯಿ ಹೆಬ್ಬಾಳೆ ವಂದಿಸಿದರು.