ಮನೆಯಲ್ಲಿ ಅಕ್ರಮ ಪಡಿತರ ಅಕ್ಕಿ ಪತ್ತೆ, ಆರೋಪಿ ಪರಾರಿ

ಚಿಂಚೋಳಿ,ಏ.18- ತಾಲೂಕಿನ ಹಸರಗುಂಡಗಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿರುವ ನಿಖರ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ರಾಜು ಮತ್ತು ಪೊಲೀಸ ಸಿಬ್ಬಂದಿಗಳಾದ ರಮೇಶ, ಅಮೀರ ಅಲಿ ಅವರನ್ನೊಳಗೊಂಡ ತಂಡ ನಿನ್ನೆ ಏ.17ರ ಮಧ್ಯಾಹ್ನ ದಾಳಿ ಮಾಡಿ 8.40 ಲಕ್ಷ ರೂ. ಮೌಲ್ಯದ ಅಕ್ಕಿಯನ್ನು ಜಪ್ತಿಮಾಡಿಕೊಳ್ಳುವಲ್ಲ್ಲಿ ಯಶಸ್ವಿಯಾಗಿದೆ.
ಹಸರಗುಂಡಗಿ ಗ್ರಾಮದ ಶರಣಸಿದ್ದಪ್ಪ ತಂದೆ ಶಂಕ್ರಪ್ಪ ಹಿರಾಪೂರ ಎಂಬುವವರ ಮನೆಯ ಎರಡು ಕೋಣೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ 480 ಪಡಿತರ ಅಕ್ಕಿ ಚೀಲಗಳನ್ನು ಜಪ್ತಿಮಾಡಿದ ಅಧಿಕಾರಿಗಳು, ಈ ಕುರಿತು ಚಿಂಚೋಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಜಾಲ ಬಿಸಲಾಗಿದೆ.