ತಾಳಿಕೋಟೆ:ಜು.19: ವಾಸಿಸಲಿಕ್ಕೆ ಸ್ವಂತ ಮನೆಯಾಗಿರಬೇಕೆಂಬುದು ಪ್ರತಿಯೊಬ್ಬರ ಕನಸು ಆ ಮನೆ ವಾಸಿಸಲಿಕ್ಕೆ ಅನುಕೂಲ ಅಲ್ಲದೇ ಶುಚಿಯಾಗಿರಬೇಕು ಅಂದ ಚೆಂದವಾಗಿರಬೇಕು ಎಂಬ ಭಾವನೆಯೊಂದಿಗೆ ದುಂದುವೆಚ್ಚ ಮಾಡದೇ ಒಳಮನೆಯಂತೆ ಮನೆಯ ಒಳಾಂಗಣದಲ್ಲಿಯೇ ಸುಂದರವಾಗಿರಬೇಕೆಂಬ ಭಾವನೆಯೊಂದಿಗೆ ತಾಳಿಕೋಟೆಯಲ್ಲಿಯ ಪುರಸಭಾ ಮಾಜಿ ಅಧ್ಯಕ್ಷರಾದ ಧಶರಥ್‍ಸಿಂಗ್ ಮನಗೂಳಿ ಅವರು ತಮ್ಮ ಮನೆಯ ಜಾಗೆಯಲ್ಲಿಯೇ ವಿವಿಧ ನಮೂನೆಯ ಹೂವಿನ ಗಿಡಗಳನ್ನು ಹಚ್ಚುವದರೊಂದಿಗೆ ಹೂದೋಟವನ್ನು ನಿರ್ಮಿಸಿ ಮನೆ ಅಷ್ಟೇ ಅಲ್ಲಾ ಸುತ್ತಮುತ್ತಲೂ ಹೂವುಗಳ ಸೂವಾಸನೆ ಬೀರುವಂತೆ ಮಾಡಿದ್ದಾರೆ.
ದಶರಥ್‍ಸಿಂಗ್ ಮನಗೂಳಿ ಅವರು ಮಾಡಿರುವ ಈ ಕಾರ್ಯವನ್ನು ನೋಡಿದರೆ ಆಡಂಬರಕ್ಕಾಗಿ ಅಲ್ಲಾ ಅಹಂಭಾವ ಪ್ರದರ್ಶನಕ್ಕಾಗಿಯೂ ಅಲ್ಲಾ ಅವರು ಮಾಡಿರುವ ಈ ಹೂದೋಟ ಕಾರ್ಯವನ್ನು ನೋಡಿದರೆ ನಾವು ಈ ರೀತಿ ನಮ್ಮ ಮನೆಯ ಅಂಗಳದಲ್ಲಿ ಏಕೆ ಮಾಡಬಾರದೆಂಬುದು ಅನಿಸದೇ ಇರಲಾರದು.
ಉತ್ತಮ ಗುಣ ನಡತೆ, ಶಿಷ್ಠಾಚಾರ, ಸೇವಾ ಚಟುವಟಿಕೆ, ಸತ್ಕರ್ಮದೊಂದಿಗೆ ಪರಶುದ್ದ ಜೀವನದಿಂದ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಪಟ್ಟಣದ ಜನತೆಯೊಂದಿಗೆ ಅಷ್ಟೇ ಅಲ್ಲಾ ಯಾವುದೇ ರಾಜಕೀಯ ವ್ಯಕ್ತಿಗಳಾಗಿದ್ದರೂ ಇವರನ್ನು ಪ್ರೀತಿಯಿಂದಲೇ ಕಾಣುತ್ತಿದ್ದಾರೆ ದಶರಥ್‍ಸಿಂಗ್ ಮನಗೂಳಿ ಅವರು ಪ್ರಮುಖ ಪಟ್ಟಣದಲ್ಲಿಯ ಗಣ್ಯರು, ಹಿರಿಯರನ್ನೂ ಕೂಡಾ ಗುರುತಿಸಿಕೊಂಡಿದ್ದಾರೆಂದು ಹೇಳಿದರೆ ತಪ್ಪಾಗಲಾರದು.
ದಶರಥ್‍ಸಿಂಗ್ ಅವರು ನಿರ್ಮಿಸಿರುವ ಮನೆಯ ಹೂದೋಟದಲ್ಲಿ ಬ್ರಹ್ಮ ಕಮಲ, ಕೃಷ ಕಮಲ, ಪಾರಿಜಾತ ಹೂವಿನ ಗಿಡ, ಈ ಹೂವಿನ ಗಿಡ ಅಯ್ಯೋಧ್ಯಯಲ್ಲಿ ನಿರ್ಮಿತವಾದ ರಾಮಮಂದಿರದ ಸ್ಥಾನದಲ್ಲಿ ಹಚ್ಚಲಾಗಿದೆ ಎಂದು ನೋಡುಗರಿಂದ ಗೊತ್ತಾಗಿದೆ.
ಇದು ಅಲ್ಲದೇ ಈ ಜಾಗೆಯಲ್ಲಿ ಗುಲಾಬಿ ಹೂವಿನ ಗಿಡ, ದ್ವಾಶ್ಯಾಳ ಹೂವಿನ ಗಿಡ, ಅಲಂಕಂಡ ಮನಿಪ್ಲಾಂಟ್, ಇದರಲ್ಲಿ ಹಳದಿ ಮತ್ತು ಬಿಳಿ ಹೂವುಗಳಾಗುತ್ತಿದ್ದು ವಿಸ್ವಸ್ಥ ಪ್ಲ್ಯಾಂಟ್ ಹೇಳಲಾಗುತ್ತಿರುವ ಈ ಗಿಡಗಳು ಇಲ್ಲಿವೆ ಕೃಷ್ಣ ಕಮಲ ಇದಕ್ಕೆ ರಾತ್ರಕಾ ರಾಣಿ ಎಂದು ಹೇಳಲಾಗುತ್ತಿರುವ ಗಿಡಕ್ಕೆ ಶ್ರೀ ಕೃಷ್ಣ ಪರಮಾತ್ಮ ತನ್ನ ಪತ್ನಿಯ ಅಪೇಕ್ಷೆ ತನಕ್ಕೆ ನಿರ್ಮಿಸಿದನೆಂದು ಹೇಳಲಾಗುತ್ತಿದ್ದರೂ ರಾತ್ರಿ 8 ಘಂಟೆಗೆ ಹೂಬಿಟ್ಟು ನಸುಕಿನ 5 ಗಂಟೆಯೊಳಗೆ ಉದರಿ ಹೋಗುತ್ತದೆಯಂತೆ, ಈ ಹೂದೋಟದಲ್ಲಿ ಶೋ ಪ್ಲಾಂಟ್, ರಬ್ಬರ ಪ್ಲಾಂಟ್ ಒಳಗೊಂಡು ಅನೇಕ ನಮೂನೆಯ ಹೂವಿನ ಗಿಡಗಳನ್ನು ನೆಟ್ಟಿರುವ ದಶರಥ್‍ಸಿಂಗ್ ಅವರು ಇವುಗಳ ಪಾಲನೆ ಪೋಷಣೆಗೆ ವ್ಯಕ್ತಿಯೋರ್ವನನ್ನೂ ಕೂಡಾ ಇಟ್ಟಿದ್ದಾರೆ.
ಇಂತಹ ಹೂದೋಟವನ್ನು ನೋಡಿದರೆ ನೋಡುಗರ ಮನಸ್ಸು ಸೆಳೆಯಲಾರದೇ ಇರಲಾರದ್ದು ಮನೆಯ ಸ್ಥಾನಮಾನದಲ್ಲಿ ಇಂತಹ ಆಕರ್ಷಮಯ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೀತ ದಶರಥ್‍ಸಿಂಗ್ ಅವರು ತಮಿಳುನಾಡಿನಲ್ಲಿ ಅರಳುತ್ತಿರುವ ಸುಂದರಮಯ ಗಿಳಿಯ ಮುಖಚರ್ಯದಂತಿರುವ ಕೋಳಿ, ಹುಂಜಗಳನ್ನು ತರಿಸಿ ತಮ್ಮ ಇನ್ನೊಂದು ತೋಟದಲ್ಲಿ ಸಾಕಾಣಿಕೆ ಮಾಡಬೇಕೆಂಬ ತಮ್ಮ ಅಪೇಕ್ಷೆಯನ್ನು ಹೊರಹಾಕಿದ ಇವರು ಈ ಹಿಂದೆ ಪುರಸಭೆ ಅಧ್ಯಕ್ಷ ಸ್ಥಾನದಲ್ಲಿದ್ದಾಗಿಯೂ ಮಾದರಿಯ ಅಧ್ಯಕ್ಷನೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದೇನು ಕಡಿಮೇನಿಲ್ಲಾ.