ಮನೆಯಲ್ಲಿಯೇ ನಾಗದೇವತೆಗೆ ಹಾಲೆರೆದ ನಾಗಠಾಣದ ಮಹಿಳೆಯರು

ವಿಜಯಪುರ:ಆ.20: ನಾಗರಪಂಚಮಿ ವಿಶೇಷವಾಗಿ ಹೆಣ್ಣು ಮಕ್ಕಳ ಹಬ್ಬ.ಈ ಹಬ್ಬದ ಪರಂಪರೆಯಂತೆ ಮಹಿಳೆಯರು, ಮಕ್ಕಳು ಹೊಸ ಬಟ್ಟೆ, ಬಳೆ ತೊಟ್ಟು, ಅಲಂಕಾರ ಮಾಡಿಕೊಂಡು ಇಂದು ಮನೆಯಲ್ಲಿ ನಾಗದೇವತೆಗೆ ಪೂಜೆ ಸಲ್ಲಿಸಿ, ಹಾಲು, ನೈವೇದ್ಯ ಅರ್ಪಿಸಿದರು.
ನಾಗರ ಪಂಚಮಿಯ ಹಿಂದಿನ ದಿನ ಸಹೋದರಿಯು ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ.
ನಾಗರ ಪಂಚಮಿಯು ಪ್ರಕೃತಿ ಮತ್ತು ಆಧ್ಯಾತ್ಮಿಕತೆಯ ಮೇಲೆ ಒಂದು ಅನನ್ಯ ದೃಷ್ಟಿಕೋನವನ್ನು ನೀಡುತ್ತದೆ. ದೇಶದ ವಿವಿಧ ಭಾಗಗಳಲ್ಲಿ ನಾಗರ ಪಂಚಮಿ ಆಚರಿಸಲಾಗುವುದು. ಈ ದಿನ ಮನೆಯಲ್ಲಿಯೇ ನಾಗರ ಪ್ರತಿಮೆ ಮಾಡಿ, ಹಾಲೆರೆಯುವ ಸಂಪ್ರದಾಯ.
ತಾಲೂಕಿನ ನಾಗಠಾಣ ಗ್ರಾಮದ ಬಂಡೆ ಕುಟುಂಬದ ಭುವನೇಶ್ವರಿ, ಸುರೇಖಾ,ಸುನೀತಾ, ಅನುಶ್ರೀ,ಶ್ರೀನಿಧಿ ಅವರು ಶೃದ್ಧಾ ಭಕ್ತಿಯಿಂದ ನಾಗದೇವತೆಗೆ ಮನೆಯಲ್ಲಿಯೇ ಹಾಲೆರೆದು ನಾಗರ ಪಂಚಮಿ ಹಬ್ಬ ಆಚರಿಸಿದರು.