ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ

ಬೀದರ:ಫೆ.28:ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತಿ ಶ್ರೀ ಮುರಲಿನಾಥ ಮೆತ್ರೆ ಯವರ ಮನೆಯಲ್ಲಿ 64 ನೆಯ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು . ಕನ್ನಡ ಪರಿಪೂರ್ಣ ಭಾಷೆಯಾಗಿದೆ.ಇಂದಿನ ಮನೆಗಳಲ್ಲಿ ಮನಸ್ಸು ಸಂಕುಚಿತವಾಗಿವೆ ಅದನ್ನು ಅಳಿಸಲು ಮತ್ತು ಕಾವ್ಯ ಸಮ್ರುದ್ದಿಗೊಳಿಸಲು ಪರಿಷತ್ತು ಹಾಕಿಕೊಂಡು ಮನೆಯಂಗಳದಲ್ಲಿ ಮಾತು ಸಾರ್ಥಕವಾಗಿದೆ.ಕನ್ನಡದ ಮೊದಲ ಅಕ್ಷರ ಅ ಅಮ್ಮ ಎನ್ನುವ ಮೂಲಕ ಭಾಷೆ ಕಲಿತುಕೊಳ್ಳತದೆ .ಮನೆಯೆ ಮೊದಲ ಶಾಲೆ ತಾಯಿಯೆ ಮೊದಲ ಗುರು ಎಂದು ಉಧ್ವಾಟಕರಾದ ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ ಹೆಳಿದರ.ಕನ್ನಡ ಭಾಷೆ ಶ್ರಿಮಂತ ಭಾಷೆಯಾಗಿದೆ.ದಾಸ,ವಚನ ಸಾಹಿತ್ಯಕ್ಕೆ ಜನ್ಮ ನೀಡಿದೆ ಕನ್ನಡ ಭಾಷೆಗಾಗಿ ಬೇಂದ್ರೆ,ಕುವೆಂಪು ತನ್ನ ಜೀವನವೆ ಮುಡುಪಾಗಿಟ್ಟು ಅಮರರಾಗಿದ್ದಾರೆ.ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀದರ್ ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಉಮಾಕಾಂತ ಮೀಸೆ ಹೆಳಿದರು.ಮುರಲಿನಾಥ ಮೆತ್ರೆ 2013 ರಲ್ಲಿಯೆ ಸಾಹಿತ್ಯ ಕ್ಷತ್ರಕ್ಕೆ ಬಂದೆ ಕಾರಣ ಒಂದು ಕಡೆ ಬಡತನ ಕಾಡುತಿತ್ತು.ಆರೋಗ್ಯ ಕೆಟ್ಟಿತು,ಓದಬೇಕೆಂಬ ಹಂಬಲ ಎಂ.ಎ.ಪಾಸಾದರೂ ಉದ್ಯೋಗ ಸಿಗಲಿಲ್ಲ,ಬದುಕುವುದಕ್ಕಾಗಿ ಹಲವಾರು ಕೆಲಸಗಳನ್ನು ಮಾಡಿದೆ.ಕೊನೆಗೆ ಶಿಕ್ಷಕ ವ್ರತ್ತಿಗೆ ಸೇರಿಕೊಂಡೆ ಈ ಎಲ್ಲಾ ಅನುಭವಗಳಿಗೆ ಸಾಹಿತ್ಯ ರೂಪದಲ್ಲಿ ಪರಮಾತ್ಮ ಎಂಬ ವಚನ ಪುಸ್ತಕ ಪ್ರಕಟಿಸಲು ಸಾಧ್ಯವಾಯಿತು ಎಂದು ಭಾವುಕರಾಗಿ ಹೇಳಿದರು.ಅಧ್ಯಕ್ಷೆತೆ ಎಂ.ಎಸ.ಮನೋಹರ ವಹಿಸಿಕೊಂಡಿದರು . ಕಸಾಪದಿಂದ ದಂಪತಿಗಳಿಗೆ ಸನ್ಮಾನಿಸಲಾತು.ಡಾ.ಸಂಜೀವಕುಮಾರ ಅತಿವಾಳೆ ಮತ್ತು ಶರಣಪ್ಪಾ ಕಣಜಿ ಸಂವಾದ ನಡೆಸಿ ಕೊಟ್ಟರು. ಮೊದಲಿಗೆ ಶಂಭುಲಿಂಗ ವಾಲದೊಡ್ಡಿ ಕನ್ನಡ ಗೀತೆ ಹಾಡಿದರು.ಅಶೋಕ ದಿಡಗೆ ,ವಿಜಯಕುಮಾರ್ ಗೌರೆ ಸುನೀತಾ ಬಿರಾದಾರ,ರಮೇಶ್ ಬಿರಾದಾರ,ಮನೋಹರ ಕಾಶಿ,ಸಿದ್ದಮ್ಮಾ ಬಸವಣ್ಣೋರ ಮತ್ತು ಮುರಲಿನಾಥ ಮೆತ್ರೆಯವರ ಬಂಧುಗಳು ಇದ್ದರು ಆತ್ಮಾನಂದ ಬಂಬುಳಗಿ ಸಂಚಾಲನೆ ಮಾಡಿದರು, ಜಗನ್ನಾಥ ಮೀನಕೆರಾ ವಂದನಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಸಂತೋಷ ಜೋಳದಾಬಕೆ, ರಘುನಾಥ್ , ಅಂಬಣ್ಣ, ವಿಜಯಲಕ್ಷ್ಮಿ , ಪುಷ್ಪ ಇದ್ದರು.