ಮನೆಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುವಂತೆ ಮನವಿ

ಕಲಬುರಗಿ:ಆ.6: ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ಆಚರಣೆಯ ಅಂಗವಾಗಿ ಆಗಸ್ಟ್ 11 ರಿಂದ 17 ರವರೆಗೆ “ಸ್ವತಂತ್ರಾ ಸಪ್ತಾಹ” ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಚಿತ್ತಾಪೂರ ಬಿಜೆಪಿ ನಗರ ಕಾರ್ಯದರ್ಶಿ ಗಿರೀಶ ಬೊಮ್ಮನಳ್ಳಿ ಜನತೆಯಲ್ಲಿ ವಿನಂತಿಸಿಕೊಂಡರು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, “ಹರ್ ಘರ್ ತಿರಂಗಾ” ಕಾರ್ಯಕ್ರಮದ ಭಾಗವಾಗಿ 2.68 ಕೋಟಿ ಮನೆಗಳು ಮತ್ತು 50 ಲಕ್ಷ ಸರ್ಕಾರಿ ಕಚೇರಿಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು.ಇದರೊಂದಿಗೆ “ಸೆಲ್ಫಿ ವಿತ್ ತಿರಂಗಾ” ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ತ್ರಿವರ್ಣಧ್ವಜದೊಂದಿಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪೆÇೀಸ್ಟ್ ಮಾಡುವಂತಾಗಬೇಕು ಎಂದಿದ್ದರು.ಜುಲೈ 19 ಮತ್ತು 23 ರಂದು ಸ್ವಾತಂತ್ರ್ಯ ಹೋರಾಟಗಾರರಾದ ಮಂಗಲ್ ಪಾಂಡೆ ಮತ್ತು ಚಂದ್ರಶೇಖರ್ ಆಜಾದ್ ಅವರ ಜನ್ಮದಿನಗಳನ್ನು ಮತ್ತು ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಮತ್ತು ಆಗಸ್ಟ್ 9 ರಂದು ಕಾಕೋರಿ ರೈಲು ಕಾರ್ಯಾಚರಣೆಯ ವಾರ್ಷಿಕೋತ್ಸವವನ್ನು ಆಚರಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅವರು ಹೇಳಿದರು.