ಮನೆಗೊಂದು ಸಸಿ ನೆಡುವ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.11: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಮನೆಗೊಂದು ಸಸಿ ನೆಡುವ ಕಾರ್ಯಕ್ರಮ ಶನಿವಾರ ನಡೆಯಿತು.
ಕೆಲವೇ ದಿನಗಳಲ್ಲಿ ಮಾನ್ಸೂನ್ ಮಾರುತ ಆರಂಭವಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಮನೆಗೊಂದು ಗಿಡ ಕಾರ್ಯಕ್ರಮದನ್ವಯ ಪಟ್ಟಣದಲ್ಲಿ 5195 ಮನೆಗಳಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಉಚಿತವಾಗಿ ಸಸಿನೆಡುವ ಕಾರ್ಯಕ್ರಮಕ್ಕೆ ಆರೋಗ್ಯ ಪರಿವೀಕ್ಷಕಿ ಬಿ. ಅನ್ನಪೂರ್ಣ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.
 ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಸುಬ್ರಹ್ಮಣ್ಯಂ, ಶೇಷಾವಲಿ, ಪಂಚಾಯಿತಿ ಸದಸ್ಯರಾದ ನಸರುದ್ದಿನ್, ಮಂಜುನಾಥ, ಮಾಬುಸಾಬ್, ರಾಘವೇಂದ್ರ, ನಾಡಂಗದ ಮಹಮ್ಮದ್ ಸಾಬ್, ಆಲಂಸಾಬ್ ಇದ್ದರು.