ಮನೆಗೊಂದು ಮರ ಊರಿಗೊಂದು ವನ ಅಭಿವೃದ್ದಿಯತ್ತ ಎಲ್ಲರ ದೃಷ್ಟಿಕೋನವಿರಲಿ

(ಸಂಜೆವಾಣಿ ವಾರ್ತೆ)
ಶಹಾಪುರ:ಜೂ:7:ಮನೆಗೊಂದು ಮರ, ಉರಿಗೊಂದು ವನ ಎಂಬ ದೃಷ್ಡಿಕೋನದಡಿಯಲ್ಲಿ ಪ್ರತಿಯೊಬ್ಬರು ತಮ್ಮ ಮನೆ ಮತ್ತು ಖಾಲಿ ಜಾಗದಲ್ಲಿ ಗಿಡಮರಗಳನ್ನು ನೆಟ್ಟು ಅಂತರ್ಜಲ ಮಟ್ಟ ಕಾಪಾಡುವುದರ ಜೊತೆಗೆ ನಮ್ಮ ಮುಂದಿನ ಪಿಳಿಗೆಗೆ ಶುದ್ದಗಾಳಿ ಹಾಗೂ ಪರಿಶುದ್ದ ಪರಿಸರ ನೀಡುವಲ್ಲಿ ಶ್ರಮ ವಹಿಸಬೇಕು. ಪರಿಸರ ನಾಶ ಮಾಡಿದಲ್ಲಿ ಪ್ರತಿ ಜೀವ ಸಂಕುಲಕ್ಕೆ ವಿನಾಶ ತಪ್ಪಿದ್ದಲ್ಲ. ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾರಾಯಣ ಚಾರ್ಯ ಸಗರ ಹೇಳಿದರು.
ಅರಣ್ಯ ಇಲಾಖೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರೆಯದಲ್ಲಿ ಎರ್ಪಡಿಸಲಾದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಕನ್ಯಾಕೊಳೂರಬೆಸ್ ಮತ್ತು ಸ್ಮಶಾಸನದಲ್ಲಿ ಸಸಿ ನೇಟ್ಟು ಅವರು ಮಾತನಾಡಿದರು.
ಅಭಿವೃದ್ದಿಯ ಹೆಸರಲ್ಲಿ ಪರಿಸರ ನಾಶ ಮಾಡುತ್ತಿದ್ದ ಕಾರಣ ಜಾಗತೀಕ ತಾಪಮಾನ ಏರಿಕೆಯಾಗಿ ಬೇಸಿಗೆ ಸಮಯದಲ್ಲಿ ಹೆಚ್ಚು ಬಿಸಿಲು ಹಾಗೆ ಮಳೆಗಾಲದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬರದೆ ಎರುಪೇರಾಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದು ನುಡಿದರು.
ನಗರ ಆಶ್ರೆಯ ಸಮಿತಿ ಅಧ್ಯಕ್ಷರಾದ ವಸಂತ ಸುರುಪುರಕರ್‍ವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ನಡೆಯಿತು.ಅರಣ್ಯ ಇಲಾಖೆ ನೀರಿಕ್ಷಕರಾದ ಐ.ಬಿ. ಹೂಗಾರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಸರ್ಕಾರಿ ಆಸ್ಪತ್ರೆಯ ಪರಿಸರ ಪ್ರೇಮಿ ವೈಧ್ಯಾಧಿಕಾರಿ ಡಾ.ಜಗದೀಶ ಉಪ್ಪಿನ, ಡಾ.ಶರಣಪ್ಪ ರಾಯಚೂರಕರ್ ಆಗಮಿಸಿದ್ದರು. ಪತ್ರಕರ್ತರಾದ ಈರಣ್ಣ ಹಾದಿಮನಿ, ಮಲ್ಲಯ್ಯ ಪೋಲಂಪಲ್ಲಿ, ಚಂದ್ರಶೇಖರ ಕಟ್ಟಿಮನಿ, ವೆಂಕಟೇಶ ಆಲೂರ, ಬಸವರಾಜ ಕರೆಗಾರ, ಚನ್ನಬಸಪ್ಪÀ ದೊಡ್ಡಮನಿ, ರಾಜು ಗುತ್ತೆದಾರ, ಕರ್ನಾಟಕ ಮಾದಿಗ ಸಾಮಾಜ ಅಧ್ಯಕ್ಷರಾದ ಶಿವುಕುಮಾರ ದೊಡಮನಿ, ಹುಲೆಪ್ಪ ದೊಡಮನಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.