ಮನೆಗೆ ಸೋಡಾ ಬಾಟಲಿ ಎಸೆತ: ಇಬ್ಬರ ಬಂಧನ


ಕುಂದಾಪುರ, ಅ.೨೭- ಗಂಗೊಳ್ಳಿ ಜಾಮೀಯ ಮಸೀದಿ ಸಮೀಪದ ಮನೆಯೊಂದಕ್ಕೆ ಅ.೨೫ರಂದು ರಾತ್ರಿ ೧೧ಗಂಟೆ ಸುಮಾರಿಗೆ ಕಿಡಿಗೇಡಿಗಳು ಸೋಡಾ ಬಾಟಲಿ ಎಸೆದು ಕಿಟಕಿ ಗಾಜುಗಳನ್ನು ಪುಡಿಗೈದಿರುವ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಗಂಗೊಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಗಂಗೊಳ್ಳಿ ದಾಕುಹಿತ್ಲುವಿನ ಧನುಷ್(೨೨), ಕಿರಣ್(೨೩) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ನಿಖಿಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.ಮೂರು ಜನರ ಆರೋಪಿಗಳು ರಾತ್ರಿ ಬೈಕಿನಲ್ಲಿ ಬಂದು ಇಫ್ತಿಕಾರ್ ಅಹ್ಮದ್ ಎಂಬವರ ಮನೆಗೆ ಸೋಡಾ ಬಾಟಲಿ ಎಸೆದಿದ್ದರು. ಇದರಿಂದ ಕಿಟಕಿ ಗಾಜುಗಳು ಪುಡಿಯಾಗಿವೆ. ಮನೆಯಿಂದ ಹೊರಗಡೆ ಬಂದ ಇಫ್ತಿಕಾರ್ ಆರೋಪಿಗಳನ್ನು ಗುರುತಿಸಿದ್ದು, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.