ಮನೆಗೆ ಬೆಂಕಿ: ೨೦ ಲಕ್ಷ ರೂ ವಸ್ತು ಭಸ್ಮ

ಸಂಜೆವಾಣಿ ವಾರ್ತೆ
ಹರಪನಹಳ್ಳಿ. ಸೆ.೧೦; ಯೋಧನ ಮನೆಗೆ ಆಕ್ಮಸಿಕ ಬೆಂಕಿ ಹತ್ತಿ ಇಪ್ಪತ್ತು ಲಕ್ಷ ರೂ. ನಗದು ಒಡವೆ ಬಂಗಾರ ಮತ್ತು ಬಟ್ಟೆ-ಬರೆ ಮೂಲ ಜಮೀನಿನ ದಾಖಲೆ ಸೇರಿದಂತೆ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಹರಪನಹಳ್ಳಿ ತಾಲೂಕಿನ ಹಾರಕನಾಳು ದೊಡ್ಡ ತಾಂಡದ ಅವಘಡ ಸಂಭವಿಸಿದೆ,ಪಿರ್ಯನಾಯ್ಕನ ಮನೆಯಲ್ಲಿ ಈ ಅವಘಡ ಸಂಭವಿಸಿದೆ.
ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಪಿರ್ಯನಾಯ್ಕ ತಂಗಿ ನೀಲಿಬಾಯಿ ಮಗಳು ಮೃತರಾದ ಹಿನ್ನೆಲೆಯಲ್ಲಿ ತನ್ನ ಕುಟುಂಬ ಸಮೇತ ಸಹೋದರಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿದೆ.ಆರ್ಮಿ ಹುದ್ದೆಯಲ್ಲಿನ ಮಗ ಸೇರಿ ಮೂವರು ಮಕ್ಕಳಿಗೆ ಮದುವೆಯ ಮಾಡಿಸಿದ ಒಡವೆ ಬಂಗಾರ ಗೃಹ ಬಳಿಕೆ ಸಾಮಾಗ್ರಿಗಳು ಮನೆಯಲ್ಲಿ ಪ್ರೀಜ್ ಏಕಾಏಕಿಬೆಂಕಿ ಹೊತ್ತಿಕೊಂಡಿತ್ತು. ಸ್ಥಳೀಯರೇ ನೀರು ಹಾಕಿ ನಂದಿಸುವ ಪ್ರಯತ್ನ ಮಾಡಿದರು ಬೆಂಕಿ ಕಡಿಮೆ ಆಗಿರಲಿಲ್ಲ ನಂತರ ಹರಪನಹಳ್ಳಿ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದರು.ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನಂದಿಸಿದರು.
ಅಷ್ಟರಲ್ಲೇ ಮನೆಯಲ್ಲಿನ ಬಹುತೇಕ ವಸ್ತುಗಳು ಸುಟ್ಟು ಹಾನಿಯಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ೨೦ ಲಕ್ಷ ರೂಪಾಯಿ ೨೫ ತೋಲಿ ಬಂಗಾರ ಬೆಳ್ಳಿ,೨೦ ಕ್ವಿಂಟಲ್ ಊಟದ ಜೋಳ ಬಟ್ಟೆಗಳು, ಹಾಸಿಗೆ, ದವಸ-ಧಾನ್ಯಗಳು, ಗೃಹಪಯೋಗಿ ವಸ್ತುಗಳು, ಪಿಠೊಪಕರಣಗಳು ಮತ್ತು ಮಕ್ಕಳ ಪುಸ್ತಕಗಳು ಮನೆ ಜಮೀನಿನ ಹಾಗೂ ಕುಟುಂಬಸ್ತರ ಮೂಲ ದಾಖಲೆಗಳಯ ಸಂಪೂರ್ಣ ನಾಶವಾಗಿದೆ.
ಮನೆಯಲ್ಲಿನ ಪ್ರೀಜ್ ಗೆ ಬೆಂಕಿ ಬಿದ್ದು ಮನೆಯೂ ಸೇರಿ ಸಂಪೂರ್ಣ ಅವಘಡ ನಡೆದಿರುವ ಶಂಕೆ ವ್ಯಕ್ತವಾಗಿದೆ. ನಿಧಾನವಾಗಿ ವಿದ್ಯುತ್ ಸ್ಪಾರ್ಕ್ ಅಥವಾ ಯಾವುದೋ ಬೆಂಕಿ ಸ್ಪರ್ಶವಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ತಹಶಿಲ್ದಾರ ಗಿರೀಶ್ ಬಾಬು ಭೇಟಿ ನೀಡಿ ಮಾಹಿತಿ ಪಡೆದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿಅಗ್ನಿಶಾಮಕ ದಳದ ಠಾಣಾಧಿಕಾರಿ ಶ್ರೀ ರಾಮಪ್ಪ, ಸಿಬ್ಬಂದಿ ನಾಗಪ್ಪ, ಸುರೇಶ,ಪಂಪಪತಿ,ಶಿವಪುತ್ರ, ರಫಿಕ್ ಹರಪನಹಳ್ಳಿ ಪಿಎಸ್‌ಐ ಹೆಚ್.ಸಿ.ಹಿರೇಮಠ ಕೆಇಬಿ ಸೆಕ್ಷನ್ ಅಧಿಕಾರಿ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುವಂತೆ ಪ್ರಯತ್ನ ಮಾಡುತ್ತೇವೆ ಎಂದು ಮಾಲಿಕ ಪಿರ್ಯನಾಯ್ಕನಿಗೆ ಧೈರ್ಯ ನೀಡಿದ್ದಾರೆ.