ಮನೆಗೆ ಬೆಂಕಿ ಅಪಾರ ಹಾನಿ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 30: ಪಟ್ಟಣದ ಅಶೋಕ ಕಾಲೋನಿಯಲ್ಲಿನ ಕೆ.ಕುಮಾರಸ್ವಾಮಿ ಎನ್ನುವವರ ಮನೆಗೆ ಬೆಳಿಗ್ಗೆ ಬೆಂಕಿ ತಗುಲಿದ್ದರಿಂದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ಅ ಸಂದರ್ಭದಲ್ಲಿ ಮನೆಯವರು ಬೇರೆ ಊರಿಗೆ ಹೋಗಿದ್ದಾರೆಂದು ತಇಳಿದು ಬಂದಿದ್ದು ಸ್ಥಳೀಯ ನೆರೆಹೊರೆಯ ಮನೆಯವರು ಮನೆಯಲ್ಲಿ ಬೆಂಕಿ ಹೊಗೆ ಕಾಣಿಸಿಕೊಂಡ ಬಗ್ಗೆ ಅಗ್ನಿ ಶಾಮಕ ಠಾಣೆಯ ಅಧಿಕಾರಿಗಳಿಗೆ ತಿಳಿಸಿದಾಗ ಅಗ್ನಿ ಶಾಮಕ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಬೆಂಕಿಯನ್ನು ನಂದಿಸಿದರಲ್ಲದೇ ಆಗುವ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಅಗ್ನಿ ಅವಘಡಕ್ಕೆ ಶಾರ್ಟ ಸಕ್ರ್ಯೂಟ್ ಕಾರಣವೆಂದು ತಿಳಿದು ಬಂದಿದೆ.