ಮನೆಗೆ ಬಂದ ತುಂಗಭದ್ರೆ

ದಾವಣಗೆರೆ.ನ.೪; ಸ್ಮಾರ್ಟ್ ಸಿಟಿ ದಾವಣಗೆರೆ ಮಹಾನಗರಕ್ಕೆ ದಿನದ ೨೪ ಗಂಟೆಗೆ ಕುಡಿಯುವ ನೀರಿನ ಜಲಸಿರಿ ಯೋಜನೆ ಅಡಿಯಲ್ಲಿ ಪ್ರತಿಯೊಂದು ಮನೆಗೆ ಒಂದು ನಳ ಹಾಗೂ ಮೀಟರ್ ಅಳವಡಿಸಿದ್ದು ಇಂದು ಬೆಳಿಗ್ಗೆ ೭.೦೦ಕ್ಕೆ ನೀರು ಸರಬರಾಜಾಗುವುದನ್ನು ಗಮನಿಸಿದ ೯ನೇಕ್ರಾಸ್ ಸಿದ್ದವೀರಪ್ಪ ಬಡಾವಣೆಯ ತಾಪ್ಸೆ ಕುಟುಂಬದ ನವದಂಪತಿಗಳಾದ ರಾಹುಲ್ ತಾಪ್ಸೆ, ಸೌಮ್ಯ ತಾಪ್ಸೆ ಅವರು “ಗಂಗೆ ಬಾರೆ ಗೌರಿಬಾರೆ, ತುಂಗಭದ್ರೆ ತಾಯಿ ನೀನು ಬಾರೆ …”ಎಂದು ಪುಣ್ಯಕೋಟಿಯ ಹಾಡಿನಿಂದ ಗಂಗೆ ಪೂಜೆ ಮಾಡಿ ಜೀವಜಲ ತುಂಬಿದ ಕೊಡಪಾನದಿಂದ ಮನೆ ತುಂಬಿಸಿಕೊಂಡರು. ನವದಂಪತಿಗಳಿಗೆ ಹಾವೇರಿಯ ಶೋಭಾ ಮಹೇಂದ್ರಕರ್, ಅನುರಾಧ ತಾಪ್ಸೆ, ನವಿಮುಂಬೈನ ಸುಧಾತಾಪ್ಸೆ ಹಾಗೂ ಶಶಿಕಲಾ ಬಳಂಕರ್ ಅವರು ಸಹಯೋಗ ನೀಡಿ, ಜಲಸಿರಿ ಯೋಜನೆಯ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಹಕರಿಸಿದ ಪದಾಧಿಕಾರಿಗಳಿಗೆ ಅಭಿನಂದನೆಗಳು ವ್ಯಕ್ತಪಡಿಸಿದರು.