ಮನೆಗೆ ನುಗ್ಗಿದ ಅನ್ಯಮತೀಯ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳಲು ಕೃಷ್ಣ ಶೆಟ್ಟಿ ಆಗ್ರಹ

ಕಡಬ: ಉಪವಾಸ ನಿರತರನ್ನು ಭೇಟಿ ಮಾಡಿದ ಕಡಬ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಮುಖಂಡರು
ಕಡಬ, ಮಾ.೧೯- ಮಧ್ಯರಾತ್ರಿ ದಾಳಿಯ ನೆಪದಲ್ಲಿ ಅರಣ್ಯಾಧಿಕಾರಿಗಳು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆಂದು ಆರೋಪಿಸಿ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪದ್ಮಯ್ಯ ಗೌಡ ಕುಟುಂಬ ಹಾಗೂ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್.ಟಿ ಅವರ ನೇತೃತ್ವದಲ್ಲಿ ಕಡಬ ತಹಸೀಲ್ದಾರ್ ಕಛೇರಿಯ ಎದುರು ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು, ಗುರುವಾರ ಉಪವಾಸ ನಿರತರಲ್ಲಿಗೆ ಕಡಬ ಬಿಜೆಪಿ ಮುಖಂಡರು ಹಾಗೂ ಕಡಬ ವಿ.ಹಿಂ.ಪ ಪ್ರಮುಖರು ಭೇಟಿ ನೀಡಿ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿದ್ದಾರೆ.
ಅನ್ಯಮತೀಯ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳಿ, ಪ್ರಕರಣ ದಾಖಲಿಸದಕ್ಕೆ ಸೂಕ್ತ ಉತ್ತರ ನೀಡಿ-ಅಧಿಕಾರಿಗಳಿಗೆ ಕೃಷ್ಣ ಶೆಟ್ಟಿ ತಾಕೀತು
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷ್ಣ ಶೆಟ್ಟಿಯವರು, ಕಳೆದ ನಾಲ್ಕು ದಿನಗಳಿಂದ ಕಡಬ ತಾಲೂಕು ಕಛೇರಿಯ ಎದುರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ವಿಚಾರಿಸಿದ್ದೆವೆ, ಅಧಿಕಾರಿಗಳು ಮಧ್ಯ ರಾತ್ರಿ ದಾಳಿ ನಡೆಸುವ ಸಂದರ್ಭದಲ್ಲಿ ಅನ್ಯ ಮತೀಯ ವ್ಯಕ್ತಿ ಅಬ್ಬಾಸ್ ಎಂಬವರು ಇದ್ದು ಅವರು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ, ಈ ವ್ಯಕ್ತಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳು ಅರಣ್ಯಾಧಿಕಾರಿಗಳ ವಿರುದ್ದ ಯಾಕೆ ಪ್ರಕರಣ ದಾಖಲಿಸುತ್ತಿಲ್ಲ ಎನ್ನುವ ಬಗ್ಗೆಯೂ ಕೂಡಲೇ ಉತ್ತರ ನೀಡಬೇಕು, ಮುಂದೆ ಕಾನೂನು ಹೋರಾಟ ಮಾಡಲು ಅವರಿಗೆ ಈಗಾಗಲೇ ಸೂಚಿಸಲಾಗಿದೆ, ಅಲ್ಲದೆ ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವಂತೆ ಅವರನ್ನು ವಿನಂತಿಸಲಾಗಿದೆ, ಒಟ್ಟಿನಲ್ಲಿ ಅಧಿಕಾರಿಗಳು ಸೂಕ್ತವಾಗಿ ಸ್ಪಂಧಿಸಿ ಪ್ರಕರಣವನ್ನು ಬೆಳೆಸಿಕೊಂಡು ಹೊಗಲು ಬಿಡಬಾರದು ಎಂದು ಹೇಳಿದ ಅವರು ಅಬ್ಬಾಸ್ ವಿರುದ್ದ ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಕೂಡ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎ.ಬಿ.ಮನೋಹರ್ ರೈ, ಸೀತಾರಾಮ ಗೌಡ ಪೊಸವಳಿಕೆ, ಪುಲಸ್ತ್ಯ ರೈ, ಗಿರೀಶ್ ಎ.ಪಿ.,ಪ್ರಕಾಶ್ ಎನ್.ಕೆ, ಮೇದಪ್ಪ ಗೌಡ ಡೆಪ್ಪುಣಿ, ಅಶೋಕ್ ಕುಮಾರ್.ಪಿ, ಫಯಾಜ್ ಕೆನರಾ, ಸದಾನಂದ ಬಿವರ್? ಮೊದಲಾದವರು ಉಪಸ್ಥಿತರಿದ್ದರು. ಕಡಬ ಪ್ರಖಂಡ ವಿ.ಹಿಂ.ಪ ಅಧ್ಯಕ್ಷ ರಾಧಾಕೃಷ್ಣ ಕೊಲ್ಪೆ, ಕಾರ್ಯದ ಪ್ರಮೋದ್ ರೈ ನಂದುಗುರಿ,ಉಪಾಧ್ಯಕ್ಷ ಸಂತೋಷ್ ಸುವರ್ಣ ಕೋಡಿಬೈಲು, ಸುರೇಶ್ ಎನ್. ಕೋಟೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.