ಮನೆಗೆ ಆಕಸ್ಮಿಕ ಬೆಂಕಿ: ಮಗು ಸೇರಿ ಇಬ್ಬರ ಸಾವು

ನಾಗಮಂಗಲ : ಏ.03: ಮನೆಗೆ ಬಿದ್ದ ಆಕಸ್ಮಿಕ ಬೆಂಕಿಗೆ 4 ವರ್ಷದ ಮಗು ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಅಗಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭರತ್ ಎಂಬುವರ ಮಗ ತನ್ವಿತ್ ಎಂಬ 4 ವರ್ಷದ ಮಗು ಮತ್ತು ಭರತ್ ಸಂಬಂಧಿ ಹಾಸನ ವಾಸಿ 33 ವರ್ಷದ ದೀಪಕ್ ಎಂಬುವರೆ ಬೆಂಕಿಗೆ ಆಹುತಿಯಾಗಿರುವ ದುರ್ದೈವಿಗಳು.
ತಾಲೂಕಿನ ಅಗಚಹಳ್ಳಿ ಗ್ರಾಮದಲ್ಲಿ ತಡರಾತ್ರಿ 3 ರಿಂದ 4 ಗಂಟೆಯೊಳಗೆ ಘಟನೆ ಸಂಭವಿಸಿದೆ.
ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಭರತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳು ಭರತ್ ಮೂಲತಃ ಮೂಡಿಗೆರೆ ವಾಸಿಯಾಗಿದ್ದು, ಕಳೆದ 10-15 ವರ್ಷಗಳಿಂದ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದನೆಂಬ ಮಾಹಿತಿ ಲಭ್ಯವಾಗಿದೆ.
ಬೆಳ್ಳೂರು ಪಟ್ಟಣದಲ್ಲಿದ್ದ ಸ್ವಂತ ಮನೆ ಮಾರಿ, ಅಗಚಹಳ್ಳಿ ಗ್ರಾಮದ ಸತೀಶ್ ಮಾಲೀಕತ್ವದ ಮನೆಯಲ್ಲಿ ಬಾಡಿಗೆ ಕರಾರಿನೊಂದಿಗೆ ಭರತ್ ಮತ್ತು ಮಗ ತನ್ವಿತ್ ವಾಸವಾಗಿದ್ದರು.
ಕೌಟಂಬಿಕ ಸಮಸ್ಯೆಯಿಂದ ಕಳೆದ ಒಂದು ವರ್ಷದಿಂದ ಹೆಚ್.ಡಿ.ಕೋಟೆಯಲ್ಲಿ ಭರತ್ ನ ಹೆಂಡತಿ ದೀಪು ಜೈನ್ ವಾಸವಾಗಿದ್ದಾರೆ.
ಶುಕ್ರವಾರ ರಾತ್ರಿ ಭರತ್ ನ ಸಂಬಂದಿ ದೀಪಕ್( ಭರತ್ ನ ಸಡಕ) ಸಂಬಂಧಿ ಮನೆಗೆ ಬಂದಿದ್ದರು.
ಸಮೀಪದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಗಾಯಾಳು ಭರತ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ದೇಹಗಳು ಏಮ್ಸ್ ನ ಶವಗಾರಕ್ಕೆ ರವಾನಿಸಲಾಗಿದೆ.
ಗಾಯಾಳು ಭರತ್ ಹೇಳಿಕೆಗಾಗಿ ಪೆÇಲೀಸರು ಕಾಯುತ್ತಿದ್ದಾರೆ.
ಬೆಳ್ಳೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.