
ಬೀದರ, ಎ.1ಃ ವಿದ್ಯಾನಗರ ಕಾಲೋನಿಯ 10ನೇ ಕ್ರಾಸ್‍ನಲ್ಲಿರುವ ಶ್ರೀಮತಿ ರುಕ್ಮಣಿಬಾಯಿ ಧನಗರ ಅವರ ಮನೆಯಲ್ಲಿ ಬಾಡಿಗೆ ಮನೆಗೆ ದಿನಾಂಕ 31 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ಜೋಳ, ಬೆಳೆ,ಅಕ್ಕಿ ಸೇರಿದಂತೆ ದಿನ ಬಳಕೆಯ ಆಹಾರ ಧಾನ್ಯಗಳು, ಬಟ್ಟೆಗಳು ಹಾಗೂ ಸಾವಿರಾರು ನಗದು ಹಣ ಸೇರಿದಂತೆ ಲಕ್ಷಾಂತರ ರೂ.ಗಳ ವಸ್ತುಗಳು ಸುಟ್ಟು ಭಸ್ಮವಾಗಿದೆ.
ತಾಲೂಕಿನ ಚಾಂಬೋಳ ಗ್ರಾಮದ ಶ್ರೀಮತಿ ಆಶಾಬಾಯಿ ವಾಮನರಾವ ಕುಲಕರ್ಣಿ ಅವರು ನಗರದ ಹಲವರ ಮನೆಯಲ್ಲಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಶ್ರೀಮತಿ ಆಶಾಬಾಯಿ ಅವರು ವಾಸ ಮಾಡುತ್ತಿರುವ ಬಾಡಿಗೆ ಮನೆಗೆ ಆಕಸ್ಮಿಕ ಬೆಂಕಿ ಹತ್ತಿದ್ದನ್ನು ಗಮನಸಿದ ಸುತ್ತ-ಮುತ್ತಲಿನ ನೆರೆಮನೆಯವರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆದರೂ ಆಹಾರ ಧಾನ್ಯಗಳು, ಬಟ್ಟೆ ಹಾಗೂ ಮನೆಗೆಲಸ ಮಾಡಿ ಕೂಡಿಟ್ಟ ನಗದು ಹಣ ಆಕಸ್ಮಿಕ ಬೆಂಕಿಗೆ ಆಹುತಿಯಾಗಿವೆ.
ಬಡಪಾಯಿ ಮಹಿಳೆ ಕೂಲಿ ಕೆಲಸ ಜೀವನ ನಿರ್ವಹಣೆ ಮಾಡುತ್ತಿದ್ದು, ರಾಜ್ಯ ಸರ್ಕಾರ ಬಡ ವೃದ್ಧ ಮಹಿಳೆಗೆ ಪರಿಹಾರ ನೀಡಬೇಕು ಎಂದು ವಿದ್ಯಾನಗರ ಕಾಲೋನಿಯ 11 ನೇ ಕ್ರಾಸ್‍ನ ವೈಷ್ಣವದೇವಿ ಮಂದಿರದ ಪೂಜಾರಿ ಡಾ. ಅಮೃತರಾವ ಮಹಾರಾಜರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.