ಮನೆಗಳ ಬಾಗಿಲಿಗೆ ಚಿಲಕ ಹಾಕಿ 21 ಕುರಿಗಳನ್ನು ಕದ್ದಖದೀಮರು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.09- ಮನೆಗಳ ಬಾಗಿಲಿಗೆ ಚಿಲಕ ಹಾಕಿ 21 ಕುರಿಗಳನ್ನು ಕದ್ದೊಯ್ದಿರು ವಘಟನೆ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದ ಬಸವ ನಾಯಕ ಎಂಬವರಿಗೆ ಸೇರಿದ ಕುರಿಗಳನ್ನು ಗುರುವಾರ ಮುಂಜಾನೆ 3 ರ ಹೊತ್ತಿಗೆಕದ್ದಿದ್ದಾರೆ ಎನ್ನಲಾಗಿದೆ.
ಬಸವನಾಯಕ ಎಂಬ ವರುಒಟ್ಟು 25 ಕುರಿಗಳನ್ನು ಸಾಕಿದ್ದರು. ಕೊಟ್ಟಿಗೆಯಲ್ಲಿ ಬಿಟ್ಟಿದ್ದ ವೇಳೆ ಕಳ್ಳರು ಬಸವನಾಯಕ ಮನೆ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೆ ಚಿಲಕ ಹಾಕಿ ಸಣ್ಣ ಕುರಿಮರಿಗಳನ್ನು ಬಿಟ್ಟು ಮಾರಾಟಕ್ಕೆ ಯೋಗ್ಯವಾಗಿದ್ದ ಕುರಿಗಳನ್ನು ಹೊತ್ತೊಯ್ದಿದ್ದಾರೆ. ಲಕ್ಷಾಂತರರೂ. ಆದಾಯದ ನಿರೀಕ್ಷೆಯಲ್ಲಿದ್ದ ಬಸವನಾಯಕ ಸದ್ಯಕಂಗಲಾಗಿದ್ದಾರೆ.
ಮಂಚಹಳ್ಳಿ ಗ್ರಾಮಕ್ಕೆ ಬೇಗೂರು ಪೆÇಲೀಸರ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.