ಮನೆಗಳ ನಿರ್ಮಾಣಕ್ಕೆ ಭರವಸೆ,ಧರಣಿ ಹಿಂದಕ್ಕೆ

ರಾಯಚೂರು, ಮಾ.೯- ವಾರ್ಡ್ ನಂಬರ್ ೩೦,೩೧ ರಲ್ಲಿ ಶೀಥಲಗೊಂಡ ಮನೆಗಳನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಆಹೋರಾತ್ರಿ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ಕ್ರಾಂತಿ ಯೋಗಿ ಶ್ರೀ ಬಸವೇಶ್ವರ ಸೇವಾ ಸಂಘದ ಅಧ್ಯಕ್ಷ ಕೆ.ರಾಜೇಶ್ ಕುಮಾರ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನಗರದ ವಾರ್ಡ್ ನಂಬರ್ ೩೦,೩೧ ರಲ್ಲಿ ಶೀಥಲಗೊಂಡ ಮನೆಗಳನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಆಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು ನಮ್ಮ ಧರಣಿಗೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ ಒಂದು ವಾರದ ನಂತರ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದಾಗಿ ಭರವಸೆ ಮೇರೆಗೆ ಧರಣಿಯನ್ನು ಹಿಂಪಡೆಯಲಾಗಿದೆ.
ವಾರ್ಡ್ ನಂ. ೩೦ ಮತ್ತು ೩೧ ರ ಸಿಯಾತಲಾಬ್‌ನಲ್ಲಿರುವ ರಾಜೀವ್ ನಗರ ಸ್ಲಮ್ ಬಡಾವಣೆಯಲ್ಲಿ ವಾಸಿಸುತ್ತಿರುವ ಜನರ ಕೆಲವು ಮನೆಗಳು ಶಿಥಿಲಾವಸ್ಥೆಯಿಂದ ಬೀಳುವ ಹಂತದಲ್ಲಿದ್ದಾಗ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಸದರಿ ಮನೆಗಳನ್ನು ನೆಲಸಮ ಮಾಡಿ, ಪುನರ್ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದು, ಇಲ್ಲಿಗೆ ಸುಮಾರು ೮ ತಿಂಗಳುಗಳು ಗತಿಸಿದರೂ ಮನೆಗಳು ನಿರ್ಮಾಣ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹಾಯಕ ಆಯುಕ್ತರು ಹಾಗೂ ಅಪಾರ ಜಿಲ್ಲಾಧಿಕಾರಿ ಅವರು ನಮ್ಮ ಜೊತೆ ಮಾತುಕತೆ ಹಾಗೂ ಚರ್ಚೆ ನಡೆದಿದ್ದು, ಈ ಮಾತುಕತೆಯಲ್ಲಿ ಜಿ ಪ್ಲಸ್ ಒನ್ ಮಾದರಿ ಮನೆಯನ್ನು ರದ್ದುಪಡಿಸಿ ನೆಲ ಅಂತಸ್ತಿನ ಮನೆಗಳ ಕಟ್ಟಡ ಪ್ರಾರಂಭ ಮಾಡಲು ಎ.ಡಿ.ಸಿ.ಯವರು ಒಂದು ವಾರದ ಗಡುವು ಕೇಳಿದ್ದು, ನಂತರ ಶಿಥಿಲಾವಸ್ಥೆಯಲ್ಲಿರುವ ಮನೆಗಳು ಹಾಗೂ ನೆಲಸಮಗೊಂಡಿರುವ ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸದರಿ ಅಧಿಕಾರಿಗಳು ಕೊಟ್ಟಿರುವ ಮಾತಿಗೆ ಧರಣಿಯನ್ನು ಹಿಂಪಡೆಯುತ್ತಿದ್ದೇವೆ.ಒಂದು ವೇಳೆ ಪುನಃ ವಿಳಂಬ ನೀತಿ ಅನುಸರಿಸಿದರೆ ನಮ್ಮ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಗೂ ರಾಯಚೂರು ನಗರ ಶಾಸಕರನ್ನು ಮುತ್ತಿಗೆ ಹಾಕುವುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದುರ್ಗಮ್ಮ,ಬುದೆಮ್ಮ, ಅಂಜಿನಮ್ಮ, ಜೆಂಗ್ಲಮ್ಮ, ಬಸಮ್ಮ, ಹೇಮಲತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.