
ವಿಜಯಪುರ,ಏ 4: ಜಿಲ್ಲೆಯ ಸಿಂದಗಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಪಟ್ಟಣದ ಚಿಕ್ಕ ಸಿಂದಗಿ ಬೈಪಾಸ್ ಬಳಿ ಅಣ್ಣಪ್ಪ ಜೇರಟಗಿ, ಸಿದ್ರಾಮ ಪಾಟೀಲ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಇವರು ಸಿಂದಗಿಯ ಸುತ್ತಮುತ್ತ ಮನೆಗಳ್ಳತನ ಮಾಡುತ್ತಿದ್ದರು.ಬಂಧಿತರಿಂದ 5.51 ಲಕ್ಷ ಮೌಲ್ಯದ 141.379 ಗ್ರಾಂ ಚಿನ್ನ ಜಪ್ತಿಮಾಡಲಾಗಿದೆ.
ಸಿಂದಗಿ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.