ಮನೆಗಳ್ಳತನ ಚಿನ್ನಾಭರಣ ಜಪ್ತಿ: ವ್ಯಕ್ತಿ ಬಂಧನ

ಬೀದರ್:ಆ.1: ನಗರದಲ್ಲಿ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತನನ್ನು ಶನಿವಾರ ಪೆÇಲೀಸರು ಬಂಧಿಸಿ ಸುಮಾರು 12.50 ಲಕ್ಷ ರೂ. ಮೌಲ್ಯದ 250 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಮನೆ ಕಳ್ಳತನ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿರುವ ಹಿನ್ನೆಲೆ ಪೆÇಲೀಸ್ ನಿರೀಕ್ಷಕ ಜಿ.ಎಸ್.ಬಿರಾದಾರ ಮತ್ತು ಪಿಎಸೈ ಸೈಯದ್ ಪಟೇಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸದರಿ ತಂಡ ಆರೋಪಿತನನ್ನು ದಸ್ತಗಿರಿ ಮಾಡಿ ಆತನಿಂದ ಚಿನ್ನಾಭರಣ ಜಪ್ತಿ ಮಾಡಿಕೊಂಡು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಂಡದಲ್ಲಿ ಸಿಬ್ಬಂದಿಗಳಾದ ನವೀನ್, ಅನೀಲ, ಇರ್ಫಾನ್, ಆರೀಫ್, ಗಂಗಾಧರ, ಪ್ರವೀಣ ಇದ್ದರು.