ಮನೆಗಳಿಗೆ ನುಗ್ಗಿ ದ ಮಳೆ ನೀರು

ಕೊಟ್ಟೂರು ಜೂ 04 : ತಾಲ್ಲೂಕಿನಲ್ಲಿ ಸುರಿದ ಭಾರಿ ಪ್ರಮಾಣದ ಮಳೆಗೆ ಪಟ್ಟಣದ ಹ್ಯಾಳ್ಯಾ ರಸ್ತೆಯ 20ನೇ ವಾರ್ಡಿನ ಅಂಬೇಡ್ಕರ್ ನಗರದ ಮಳೆಗೆ ಗುಡಿಸಲಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ ಒಂದೆಡೆ ಮಳೆನೀರಿನ ಆರ್ಭಟ ದೊಂದಿಗೆ ವಿಷಜಂತುಗಳ ಆದ ಹಾವುಗಳು ಪ್ರತ್ಯಕ್ಷವಾಗಿದ್ದು ಸ್ಥಳೀಯ ನಿವಾಸಿಗಳ ನಿದ್ದೆಗೆಡುವಂತೆ ಮಾಡಿದೆ.
ಮಹಾಮಾರಿ ಕರೋನವೈರಸ್ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಅತಿ ಹೆಚ್ಚು ಕೂಲಿ ಕೆಲಸ ಮಾಡುವ ಕಾಲೋನಿಗೆ ನೀರು ನುಗ್ಗಿದ್ದು ಜನರ ಜೀವನವನ್ನು ಅಸ್ತವ್ಯಸ್ತ ಗೊಳಿಸಿದೆ