ಮನೆಗಳಿಗೆ ನುಗ್ಗಿದ ಮಳೆನೀರು ಪರಿಹಾರಕ್ಕೆ ಆಗ್ರಹ

ಚಿಂಚೋಳಿ,ಆ.29- ತಾಲೂಕಿನ ಹಲಕೋಡ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಗ್ರಾಮದ ಕೆಲ ಮನೆಗಳಲ್ಲಿ ನೀರು ನುಗ್ಗಿ ಮನೆಗಳಲ್ಲಿರುವ ದಿನ ವಸ್ತುಗಳು ಸಂಪೂರ್ಣ ಹಳಗಿದ್ದು, ಮಳೆ ನೀರಿನಿಂದ ಹಾವು ಚೇಳು, ಹೂಳಕಿಟ ಇತರ ಜಂತುಗಳ ಕಾಟದಿಂದ ಸಂತ್ರಸ್ಥರು ಕಂಗಾಲು ಆಗಿದ್ದಾರೆ.
ಮನೆ ಒಳಗೆ ನುಗ್ಗಿದ ಮಳೆ ನೀರು ತೆಗೆದು ಹಾಕಲು ಈಡಿ ರಾತ್ರಿ ನಿದ್ದೆ ಮಾಡದೇ ಜನರು ಕಂಗಾಲಾಗಿದ್ದಾರೆ, ಸಂಬಂಧಪಟ್ಟ ಅಧಿಕಾರಿಗಳು ಹಲಕೋಡ ಗ್ರಾಮದಲ್ಲಿ ಮಳೆ ನೀರು ಸಂತ್ರಸ್ಥರ ನೆರವಿಗೆ ಮುಂದಾಗಬೇಕು ಎಂದು ಗ್ರಾಮದ ಮುಖಂಡರಾದ ಬೈನಪ್ಪ ಗುತ್ತೇದಾರ್, ದಸರತ್ ಮುಧೋಳ್, ಸೀನು, ಅವರು ಆಗ್ರಹಿಸಿದ್ದಾರೆ.
ಬಾರಿ ಮಳೆಯಿಂದಾಗಿ ಕೆಲ ಮನೆಗಳಿಗೆ ನೀರು ನುಗಿದ್ದು, ಹಾನಿಗಿಡಾಡ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.