ಮನೆಕೆಲಸದ ಮಹಿಳೆಯರಿಗೆ ಆಹಾರದ ಕಿಟ್

ದಾವಣಗೆರೆ. ಮೇ.೩೧;  ನಗರದ ಶಿವಕುಮಾರ ಸ್ವಾಮಿ ಬಡಾವಣೆ 2 ನೇ ಹಂತದ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ ದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ, ಅಧ್ಯಕ್ಷರಾದ ಜಿ.ಪಿ.ಮುಪ್ಪಣ್ಣ  ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಹನುಮಂತರಾಯ ನೇತೃತ್ವದಲ್ಲಿ ಆಟೋ ಚಾಲಕರಿಗೆ ಹಾಗೂ ಮನೆಕೆಲಸದ ಹೆಣ್ಣುಮಕ್ಕಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ  ಪ್ರೇರಣಾ ಸಾಂಸ್ಕೃತಿಕ  ಸಂಸ್ಥೆಯ  ಚೇತನ ಬಾಯಿ ,ವಾರ್ಡ್ ನ ಪಾಲಿಕೆ ಸದಸ್ಯವೀರೇಶ್,  ನಾಗರಿಕ ಸಮಿತಿಯ ಮುಖಂಡರಾದ  ಮೌನೇಶಪ್ಪ,ಚನ್ನಬಸಪ್ಪ, ತಿಮ್ಮಣ್ಣ, ಪರಮೇಶ್ವರಪ್ಪ,ಶೇಖರ್,ಓಂಕಾರಪ್ಪ ಮೆಣಸಿನಕಾಯಿ, ಬಸವರಾಜಪ್ಪ, ಶಶಾಂಕ ಹಾಗೂ ಸದಸ್ಯರು ಹಾಜರಿದ್ದರು.