
ಸಂಜೆವಾಣಿ ವಾರ್ತೆ
ಗಂಗಾವತಿ, ಏ.10: ನಗರದಲ್ಲಿ ವಿವಿಧಡೆ ನಡೆದ ಮನೆ ಕಳ್ಳತನ ಪ್ರಕರಣದಡಿ ಹನುಮೇಶ ಭಜೆಂತ್ರಿ ಎನ್ನುವ ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 4 ಲಕ್ಷ ರೂ. ಬೆಲೆ ಬಾಳುವ 80 ಗ್ರಾಮ್ ತೂಕದ ಚಿನ್ನಾಭರಣ ಜಪ್ತಿಮಾಡಲಾಗಿದೆ. ನಗರ ಠಾಣಾ ವ್ಯಾಪ್ತಿಯಲ್ಲಿ ಹಲವು ಮನೆಗಳ ಕಳ್ಳತನ ನಡೆದಿತ್ತು. ಎಸ್.ಪಿ ಯಶೋದಾ ಒಂಟಿಗೋಡೆ, ಡಿವೈಎಸ್ಪಿ ಎಚ್.ಶೇಖರಪ್ಪ ಮಾರ್ಗದರ್ಶನದಲ್ಲಿ ಸಿಪಿಐ ಎ.ಎಸ್ ಗುದಿಗೊಪ್ಪ ಸೇರಿದಂತೆ ಇತೆರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡವು ಕಳ್ಳತನದ ಜಾಡು ಹಿಡಿದು ಹನುಮೇಶ ಭಜಂತ್ರಿ ಎನ್ನು ಆರೋಪಿಯನ್ನು ಪತ್ತೆ ಮಾಡಿ ಅತನ ಬಳಿ ಇದ್ದ 850 ಗ್ರಾಮ ಚಿನ್ನ ಆಭರಣಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಯಲಬುರ್ಗಾ ಠಾಣೆಯಲ್ಲಿ 02 ಮನೆ ಹಾಗೂ ಗಂಗಾವತಿಯಲ್ಲಿ 4 ಮನೆ ಕಳ್ಳತನ ಪ್ರಕರಣ ಸೇರಿ ಒಟ್ಟು 6 ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.