ಮನೆಕಟ್ಟುತ್ತೇವೆಂದರು ಗುಡಿಸಲು ಕಿತ್ತಿದೆವು
ಅತ್ತ ಮನೆಯೂ ಇಲ್ಲ, ಇತ್ತ ಗುಡಿಸಲೂ ಇಲ್ಲ ಶಿವಲಿಂಗನಗರದ ಬಡ ಜನರ ಗೋಳಿಗೆ ಬೆಲೆ ಇಲ್ಲ.


* ಕೊಳಗೇರಿ ಅಭಿವೃದ್ದಿ ಮಂಡಳಿಯ ಅವಾಂತರ
* ನೆಮ್ಮದಿಯಾಗಿದ್ದವರಿಗೆ ಸಂಕಷ್ಟ ತಂದಿಟ್ಟರು
* ಲಕ್ಷಾಂತರ ರೂ ವೆಚ್ಚದ ಮನೆ ಎಂದು ಬಾಡಿಗೆ ಮನೆಗೆ ದೂಡಿದಿರು.
* ಬಡ್ಡಿ ಕಟ್ಟಿ ಸಾಯುತ್ತಿದ್ದೇವೆ
* ಅಧಿಕಾರಿಗಳ ನಿರಾಸಕ್ತಿ ಆರಂಭವಾಗದ ಮನೆಗಳು
ಎನ್ ವೀರಭದ್ರಗೌಡ.
ಬಳ್ಳಾರಿ:ಸೆ.21- ಸರ್ಕಾರ ಮನೆ ಕಟ್ಟುತ್ತಂತ ಇದ್ದ ಗುಡಿಸಲು ಕಿತ್ತು ಈಗ ಬಾಡಿಗೆ ಮನೆಯಲ್ಲಿದ್ದೇವೆ. ಅತ್ತ ಮನೆ ಇಲ್ಲ ಇತ್ತ ಗುಡಿಸಲೂ ಇಲ್ಲದಂತಾಗಿದೆ. ಹೊಟ್ಟೆಗೆ ದುಡಿದು ತಿನ್ನುವುದೇ ಕಷ್ಟವಾಗಿರುವಾಗ. ಮನೆ ಬಾಡಿಗೆ ಬೇರೆ. ಅಲ್ಲದೆ ಮನೆ ಕೊಡುತ್ತಾರೆಂದು ನೀಡಿರುವ ರೋಕ್ಕಕ್ಕೆ ಬಡ್ಡಿ ಬೇರೆ ಕಟ್ಟ ಬೇಕು. ಇದು ನಮ್ಮ ಇಲ್ಲಿನ 38 ನೇ ವಾರ್ಡಿನ ಶಿವಲಿಂಗನಗರದ ಬಡ ಜನತೆ ಗೋಳಾಗಿದೆ. ಇದಕ್ಕೆ ಮೂಲ ಕಾರಣ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಸ್ಥಳೀಯ ಅಧಿಕಾರಿಗಳ ರಾಜಕೀಯ ಮತ್ತು ನಿರ್ಲಕ್ಷವೇ ಕಾರಣವಾಗಿದೆನ್ನುತ್ತಾರೆ ನೊಂದ ಜನತೆ.
ಬಳ್ಳಾರಿ ನಗರಕ್ಕೆ ಮೊದಲ ಹಂತವಾಗಿ 551 ಮೊದಲ ಹಂತದಲ್ಲಿ ಮತ್ತು ಎರಡನೇ ಹಂತದಲ್ಲಿ 509 ಮನೆಗಳನ್ನು ನಿರ್ಮಿಸಲು ಕೇಂದ್ರಸರ್ಕಾರದಿಂದ ಪ್ರತಿ ಮನೆಗೆ ಒಂದು ಮುಕ್ಕಾಲು ಲಕ್ಷ ರೂ ಮತ್ತು ರಾಜ್ಯ ಸರ್ಕಾರದಿಂದ ಒಂದು ವರೆ ಲಕ್ಷರೂ ಅನುದಾನ ಬಿಡುಗಡೆಯಾಗಿದೆ. ಒಂದು ಮನೆಯ ವೆಚ್ಚ 7 ಲಕ್ಷರೂ ಗಳಾಗಿದ್ದು. ಉಳಿದ ಹಣದಲ್ಲಿ ಆರಂಭಿಕವಾಗಿ ಎಸ್ಸಿ ಎಸ್ಟಿ ಫಲಾನುಭವಿಗಳು 70 ಸಾವಿರ ರೂ ಮತ್ತು ಉಳಿದವರು ಒಂದು ಲಕ್ಷದ 5 ಸಾವಿರ ರೂ ಡಿಡಿ ನೀಡಬೇಕು. ಇನ್ನುಳಿದಿದ್ದು ಬ್ಯಾಂಕ್ ಮೂಲಕ ಸಾಲವಾಗಿ ನೀಡಲಿದೆ.
ಮೊದಲ ಹಂತದ ಮನೆಗಳನ್ನು ಆರು ತಿಂಗಳಲ್ಲಿ  ನಿರ್ಮಾಣ ಮಾಡಲು ಬಳ್ಳಾರಿಯ ಶ್ರೀನಿವಾಸ ಇನ್ಪ್ರಾ ಲಿಮಿಟೆಡ್‍ನ ಪಿಚ್ಚೇಶ್ವರ ರಾವ್ ಎಂಬುವವರಿಗೆ ಟೆಂಡರ್ ಆಗಿದೆಯಂತೆ. ಆದರೆ ಅವರು ನಿರ್ಮಾಣ ಮಾಡದೆ. ಚಂದ್ರಮೋಹನ್ ಎಂಬ ಗುತ್ತಿಗೆದಾರರಿಗೆ ಸಬ್ ಕಾಂಟ್ರಾಕ್ಟ್ ನೀಡಿದ್ದಾರಂತೆ. ಮಂಜೂರಾದ 551 ಮನೆಗಳಲ್ಲಿ 200 ಕ್ಕೂ ಹೆಚ್ಚು ಮನೆಗಳ ಕಾಮಗಾರಿ ನಗರದ ಹಲವಡೆ ಆರಂಭ ಮಾಡಿದೆಯಂತೆ. ಇನ್ನುಳಿದವುಗಳು ಆರಂಭವಾಗಬೇಕಿದೆ.
ಈ ರೀತಿ ಚೊಕ್ಕದಾದ ಮನೆಗಳನ್ನು ಕಟ್ಟಿಸಿಕೊಳ್ಳಲು ಕನಸು ಕಂಡ ಇಲ್ಲಿನ ಜನ 5 ರೂ ಬಡ್ಡಿಗೆ ಸಾಲ ತಂದು ಕೊಳಗೇರಿ ಅಭಿವೃದ್ದಿ ಮಂಡಳಿಗೆ ಡಿಡಿ ಕಟ್ಟಿ, ಇನ್ನೇನು ಮನೆಕಟ್ಟುವ ಕಾರ್ಯ ಆರಂಭವಾಗುತ್ತೆ ಎಂದು ಅಧಿಕಾರಿಗಳು ಬಂದು ಹೇಳಿದ ಮೇಲೆ ತಮ್ಮ ಗುಡಿಸಲುಗಳನ್ನು ಕಿತ್ತಿಕೊಂಡು ಐದು ಸಾವಿರ ರೂ ಬಾಡಿಗೆ ಮನೆಗಳಿಗೆ ತೆರಳಿದರು ಇಲ್ಲಿನ ಶಿವಲಿಂಗ ನಗರದ ಬಡ ಕುಟುಂಬಗಳು.
ಆದರೆ ಗುಡಿಸಲು ಕಿತ್ತುಕೊಂಡು ಮೂರು ತಿಂಗಳಾದರೂ ಮನೆಗಳ ನಿರ್ಮಾಣ ಕಾರ್ಯ ಮಾತ್ರ ಆಗುತ್ತಿಲ್ಲ. ಇತ್ತ ತಂದ ಸಾಲಕ್ಕೆ ಬಡ್ಡಿ ಹೊರೆ, ಬಾಡಿಗೆ ಮನೆಯ ಹೊರೆ. ಇದಾವುದು ಅಧಿಕಾರಿಗಳು ತಮಗೆ ಸಂಬಂಧವಿಲ್ಲ ಎಂಬಂತೆ ಇದ್ದಾರೆ. ಕಚೇರಿಗೆ ಹೋಗಿ ಕೇಳಿದರೆ ಇಂದು ನಾಳೆ ಎನ್ನುತ್ತಲೇ ಇದ್ದಾರಂತೆ.

ಸ್ಥಳೀಯ ಕಾಪೋರೇಟರ್ ಕುಬೇರ್ ಅವರು ಸಹ ತಮ್ಮೊಡನೆ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ ಏನೂ ಉಪಯೋಗವಾಗಿಲ್ಲ. ಕಳೆದ 70 ವರ್ಷಗಳಿಂದ ಇದ್ದ ಗುಡಿಸಲು ಕಿತ್ತಿ ಬಾಡಿಗೆ ಮನೆಯಲ್ಲಿದ್ದೇವೆ. ಕೂಲಿ ಮಾಡಿ ಬದುಕುವ ನಾವು ತೆಗೆದುಕೊಂಡು ಬಂದ ಸಾಲದ ಬಡ್ಡಿ ಹೆಚ್ಚುತ್ತಿದೆ ಬೇಗ ಮನೆ ಕಟ್ಟಿಕೊಡಿ.
ದಾಸರ ವೆಂಕಟರಾಜು, ಶಿವಲಿಂಗನಗರ.

ಮನೆ ಕಟ್ತಾರಂತ ಇದ್ದ ಗುಡಿಸಲು ಕಿತ್ತಿಕೊಂಡು ಬಾಡಿಗೆ ಮನೆಗೆ ಹೋಗಿವಿ, ಟೈಲರ್ ಕೆಸಲ ಮಾಡುವ ನಾವು ಒಂದು ಲಕ್ಷ ರೂ ಸಾಲ ತಂದು ಡಿಡಿ ಕಟ್ಟಿದೆ. ಮಾರ್ಕು ಮಾಡಿ ಹೋದರು. ಮೂರು ತಿಂಗಳಾದರೂ ನಮ್ಮ ಮನೆ ಕಟ್ಟುತ್ತಿಲ್ಲ. ಮತ್ತೆ ಈ ಕಡೆ ಬರಲಿಲ್ಲ. ಬೇರೆಯವರ ಮನೆ ಕಟ್ತಾರೆ, ಅಧಿಕಾರಿಗಳನ್ನು ಕೇಳಿದರೆ ಸರಿಯಾದ ಉತ್ತರ ಕೊಡ್ತಾ ಇಲ್ಲ.
ಮಹಮ್ಮದ್ ನೂರ್ ಅಲ್ಲಾ. 38 ನೇ ವಾರ್ಡು ಬಳ್ಳಾರಿ.

ಪೋನ್ ರಿಸೀವ್ ಮಾಡಲ್ಲ
ಜನರ ಸಂಕಷ್ಟ ಕೇಳಲ್ಲ:
ಈ ಬಗ್ಗೆ ವಿವರಣೆ ಪಡೆಯಲು ಇಲ್ಲಿನ ವಿದ್ಯಾನಗರದಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಜಿ.ಕೃಷ್ಣಾ ರೆಡ್ಡಿ ಕಚೇರಿಗೆ ತೆರಳಿದರೆ. ಅವರು ಮಾತ್ರ ನಾಪತ್ತೆ. ಸಿಬ್ಬಂದಿಯನ್ನು ಕೇಳಿದರೆ ಅವರು ಯಾವಾಗ ಬರ್ತಾರೆ, ಯಾವಾಗ ಹೋಗ್ತಾರೆ ಅಂತ ಹೇಳಕಾಗಲ್ಲ. ಒಟ್ಟಿನಲ್ಲಿ ಕಚೇರಿಯಲ್ಲಿ ಸಿಗುವುದು ಕಷ್ಟ ಎನ್ನುತ್ತಾರೆ. ಅವರ ಮೊಬೈಲ್ ಕರೆ ಮಾಡಿದರೆ ಸ್ವೀಕರಿಸಲ್ಲ. ಇನ್ನು ಮೆಸೇಜ್ ಮಾಡಿದರೂ ಅದನ್ನು ನೋಡಿಯೂ ತಿರುಗಿ ಕಾಲ್ ಮಾಡಲ್ಲ. ಕಳೆದ ಏಳು ವರ್ಷಗಳಿಂದ ಇದೇ ಕಚೇರಿಯಲ್ಲಿರುವ ಇವರು. ಸ್ಥಳೀಯರೇ ಆಗಿರುವ ಕಾರಣ ಅಧಿಕಾರಕ್ಕೆ ಬಂದವರ ಬಾಳ ಬಡಿಯುತ್ತ. ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಓಡಾಡುತ್ತಾರಂತೆ.
ಅನೇಕ ಜನರಿಗೆ ನೀವೇ ಮನೆ ಕಟ್ಟಿಸಿಕೊಳ್ಳಿ ನಾವು ದುಡ್ಡು ಕೊಡುತ್ತೇವೆ ಎಂದು. ಮನೆ ಕಟ್ಟಿಸಿಕೊಂಡವರಿಗೆ ದುಡ್ಡುಕೊಡದೇ ಕಚೇರಿಗೆ ಅಲೆಸುತ್ತಾರಂತೆ. ಒಟ್ಟಾರೆ ಇವರು ಆಡಿದ್ದೇ ಆಟವೆಂಬಂತಾಗಿದೆಯಂತೆ. ಮಾದ್ಯಮದವರಷ್ಟೇ ಏಕೆ, ಜನಪ್ರತಿನಿಧಿಗಳ,  ಹಿರಿಯ ಅಧಿಕಾರಿಗಳ ಕರೆಗೂ ಬೆಲೆ ಕೊಡಲ್ಲ ಎಂಬ ಮಾತು ಅವರದೇ ಕಚೇರಿಯಲ್ಲಿ ಕೇಳಿಬಂತು.
ಈ ಅಧಿಕಾರಿ ಬೇಜವಾಬ್ದಾರಿ ಬಗ್ಗೆ ವಿರೋಧ ವ್ಯಕ್ತಪಡಿಸಿ ಇಲ್ಲಿನ ಪಾಲಿಕೆಯ ಸದಸ್ಯರು ಕಳೆದ ತಿಂಗಳು ಕಚೇರಿಗೆ ತೆರಳಿ ಗಲಾಟೆ ಮಾಡಿದಾಗ ಸೆ.1 ರಿಂದ ಮನೆಗಳ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದರಂತೆ. ಆದರೆ  ರಾಜಕೀಯ ಮಾಡುವ ಈ ಶುರು ಮಾಡಿರುವುದು ಬಿಜೆಪಿ ಸದಸ್ಯರು ಹೇಳಿರವನ್ನು ಮಾತ್ರ, ಕಾಂಗ್ರೆಸ್ ಸದಸ್ಯರು ಡಿಡಿ ಕಟ್ಟಿಸಿದ್ದನ್ನು ಮಾಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Attachments area